ETV Bharat / sitara

ಪ್ರಶಸ್ತಿ ವಿಚಾರದಲ್ಲಿ ಹುಸಿಯಾದ ನಿರೀಕ್ಷೆ...ಬೇಸರ ವ್ಯಕ್ತಪಡಿಸಿದ ಸಿನಿಪ್ರಿಯರು

author img

By

Published : Mar 23, 2021, 11:34 AM IST

ಈ ಬಾರಿ ಕನ್ನಡಕ್ಕೆ ಎರಡು ರಾಷ್ಟ್ರಪ್ರಶಸ್ತಿಗಳು ಮಾತ್ರ ದೊರೆತಿದ್ದು ಸಿನಿಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ', ಪಿ. ಶೇಷಾದ್ರಿ ನಿರ್ದೇಶನದ 'ಮೋಹನ್ ದಾಸ್', ರಾಮದಾಸ್ ನಾಯ್ಡು ನಿರ್ದೇಶನದ 'ಗಿಳಿಯು ಪಂಜರದೊಳಿಲ್ಲ', ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಅಮೃತಮತಿ' ಚಿತ್ರಗಳಿಗೆ ಪ್ರಶಸ್ತಿ ದೊರೆತಿಲ್ಲ.

Sheshadri, Girish kasaravalli
ಪಿ. ಶೇಷಾದ್ರಿ, ಗಿರೀಶ್ ಕಾಸರವಳ್ಳಿ

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ಕನ್ನಡದ 'ಅಕ್ಷಿ' ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಬಂದಿದೆ. ಮಿಕ್ಕಂತೆ ಸ್ಪರ್ಧಾತ್ಮಕ ವಿಭಾಗದಲ್ಲಿ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಸಾಹಸ ನಿರ್ದೇಶನಕ್ಕೆ ವಿಕ್ರಮ್ ಮೋರ್ ಅವರಿಗೆ ಅತ್ಯುತ್ತಮ ಸಾಹಸ ನಿರ್ದೇಶಕ ಪ್ರಶಸ್ತಿ ಸಿಕ್ಕರೆ, ಕನ್ನಡಕ್ಕೆ ಯಾವೊಂದು ಮಹತ್ವದ ಪ್ರಶಸ್ತಿಯೂ ಸಿಕ್ಕಿಲ್ಲ ಎನ್ನುವುದು ಬೇಸರದ ಸಂಗತಿ.

ಇದನ್ನೂ ಓದಿ: ಸಖತ್ ಚಿತ್ರಕ್ಕಾಗಿ ಕುರುಡನಾದ ಗೋಲ್ಡನ್ ಸ್ಟಾರ್!

ಈ ಬಾರಿ ಕನ್ನಡ ಚಿತ್ರರಂಗಕ್ಕೆ ಹಲವು ಪ್ರಶಸ್ತಿಗಳು ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಕಾರಣ, ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಕನ್ನಡ ನಿರ್ದೇಶಕರ ಚಿತ್ರಗಳು ಈ ಬಾರಿ ಕಣದಲ್ಲಿದ್ದವು. ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ', ಪಿ. ಶೇಷಾದ್ರಿ ನಿರ್ದೇಶನದ 'ಮೋಹನ್ ದಾಸ್', ರಾಮದಾಸ್ ನಾಯ್ಡು ನಿರ್ದೇಶನದ 'ಗಿಳಿಯು ಪಂಜರದೊಳಿಲ್ಲ', ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಅಮೃತಮತಿ' ಸೇರಿದಂತೆ ಹಲವು ಚಿತ್ರಗಳು ಕಣ್ದಲ್ಲಿದ್ದವು. ಆದರೆ ಯಾವ ನಿರ್ದೇಶಕರ ಚಿತ್ರಗಳಿಗೂ ಈ ಬಾರಿ ಮನ್ನಣೆ ಸಿಕ್ಕಿಲ್ಲ ಎನ್ನುವುದು ಗಮನನಾರ್ಹ. ಈ ಪೈಕಿ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಮತ್ತು 'ಅಮೃತಮತಿ' ಚಿತ್ರಗಳು ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿ ಕೆಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಆದರೆ, ಈ ಯಾವ ಚಿತ್ರಗಳಿಗೂ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಸಿಕ್ಕಿಲ್ಲ ಎನ್ನುವುದು ಬೇಸರದ ಸಂಗತಿ. ಈ ಬಾರಿ ಆಯ್ಕೆ ಸಮಿತಿಯಲ್ಲಿ ಕರ್ನಾಟಕಕ್ಕೆ ಸೂಕ್ತ ಪ್ರಾಧಾನ್ಯತೆ ಸಿಕ್ಕಿಲ್ಲ. ಕಳೆದ ಬಾರಿ ಕರ್ನಾಟಕದ ಪರವಾಗಿ ಬಿ.ಎಸ್. ಲಿಂಗದೇವ್ರು ಪ್ರತಿನಿಧಿಸಿದ್ದು, ಕನ್ನಡ ಚಿತ್ರಗಳಿಗೆ ಹಲವು ಪ್ರಶಸ್ತಿಗಳನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಈ ಬಾರಿ ಅಂತಹ ಯಾವುದೇ ಪ್ರತಿನಿಧಿಗಳು ಇರಲಿಲ್ಲವಾದ್ದರಿಂದ ಈ ಬಾರಿ ಕನ್ನಡಕ್ಕೆ ಪ್ರಶಸ್ತಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.