ಯುವ ಸಾಮ್ರಾಟ್ ಅಂತಾನೆ ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿದ್ದ ಚಿರಂಜೀವಿ ಸರ್ಜಾ ಕಾಲವಾಗಿ ಆರೇಳು ತಿಂಗಳುಗಳೇ ಗತಿಸಿವೆ. ಆದ್ರೆ ಅಭಿಮಾನಿಗಳ ಎದೆಯಲ್ಲಿ ಶಾಶ್ವತವಾಗಿ ಉಳಿದಿರುವ ನಟ, ಒಂದಿಲ್ಲೊಂದು ರೂಪದ ಮೂಲಕ ಆಗಾಗ ಹೊರ ಬರುತ್ತಾರೆ.
ಹೌದು ಇದೀಗ ಚಿರಂಜೀವಿ ಸರ್ಜಾ ಅಭಿಮಾನಿಯೊಬ್ಬರು ತನ್ನ ನೆಚ್ಚಿನ ನಟನ ಫೋಟೋವನ್ನು ಬಿಡಿಸಿದ್ದಾರೆ. ಆದ್ರೆ ಇದರಲ್ಲಿ ಒಂದು ವಿಶೇಷ ಇದೆ. ಅದೇನು ಎಂದರೆ, ಮೇಘನಾ ರಾಜ್ ಹೆಸರನ್ನೇ ಬಳಿಸಿಕೊಂಡು ಚಿರಂಜೀವಿ ಸರ್ಜಾ ಅವರ ಫೋಟೋವನ್ನು ರೂಪಿಸಲಾಗಿದೆ. ಆ ಚಿತ್ರದ ತುಂಬೆಲ್ಲ ಮೇಘನಾ ರಾಜ್ ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದೆ.
- " class="align-text-top noRightClick twitterSection" data="
">
ಇದನ್ನೂ ಓದಿ : ನನ್ನಂತೆ ಯಾರೂ ಮೋಸ ಹೋಗಬೇಡಿ...ಮಲಯಾಳಂ ನಟಿ ಶಕೀಲಾ ಮನದಾಳದ ಮಾತು
ಈ ವಿಡಿಯೋ ನೋಡಿರುವ ಮೇಘನಾ ರಾಜ್ ಫುಲ್ ಖುಷ್ ಆಗಿದ್ದಾರೆ. ಅಭಿಮಾನಿ ಕೈಯಿಂದ ಚಿತ್ರದಲ್ಲಿ ರೂಪುಗೊಂಡಿರುವ ಚಿರುವಿನ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
- " class="align-text-top noRightClick twitterSection" data="
">
ಇನ್ನು ಸದ್ಯ ನಟಿ ಮೇಘನಾ ತಮ್ಮ ಮುದ್ದು ಮಗನ ಆರೈಕೆಯಲ್ಲಿ ತೊಡಗಿದ್ದಾರೆ. ಇತ್ತೀಚಿಗೆ ಮಗು ಸೇರಿದಂತೆ ಇಡೀ ಕುಟುಂಬಕ್ಕೆ ಕೊರೊನಾ ಬಂದಿತ್ತು. ಸುಂದರ್ ರಾಜ್ ಮತ್ತು ಪತ್ನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಪಡೆದಿದ್ದರು. ಹಾಗೂ ಮೇಘನಾ ಮತ್ತು ಮಗು ಮನೆಯಲ್ಲಿ ಕ್ವಾರಂಟೇನ್ ಆಗಿ ಚಿಕಿತ್ಸೆ ಪಡೆದಿದ್ದರು.