ಈ ಮೇಲಿನ ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರದಲ್ಲಿರುವ ಅಣ್ಣ-ತಂಗಿ ಇಂದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಟ-ನಟಿಯಾಗಿ ವಿಜೃಂಭಿಸುತ್ತಿದ್ದಾರೆ. ಕಲಾವಿದರ ಕುಟುಂಬದಲ್ಲೇ ಜನಿಸಿದ ಈ ಸಹೋದರ - ಸಹೋದರಿ ಬೆಳೆದು ದೊಡ್ಡವರಾಗಿ ಮಿನುಗುವ ತಾರೆಯರಾಗಿದ್ದಾರೆ. ಹಾಗಾದರೆ ಈ ಪಟದಲ್ಲಿರುವವರು ಯಾರು ಅಂತಾ ಗೊತ್ತಾಯಿತಾ?
ತಂಗಿಯ ಹೆಗಲ ಮೇಲೆ ತನ್ನ ಕೈಗಳನ್ನಿರಿಸಿ ಕ್ಯಾಮರಾ ನೋಡುತ್ತಿರುವುದು ಸ್ಯಾಂಡಲ್ವುಡ್ನ ಅಧ್ಯಕ್ಷ ಶರಣ್. ಅಣ್ಣನೊಂದಿಗೆ ಚಂದದ ನಗು ಬೀರುತ್ತ ಕುಳಿತಿರುವುದು ನಟಿ ಶೃತಿ. ಇದು ಶರಣ್ ಹಾಗೂ ಶೃತಿ ಅವರ ಬಾಲ್ಯದ ಫೋಟೋ. ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ, ಎಲ್ಲರೂ ಭಾವಿಸಿದಂತೆ ಶರಣ್ ಅವರು ಶೃತಿಯವರ ತಮ್ಮನಲ್ಲ. ಬದಲಾಗಿ ಹಿರಿಯ ಅಣ್ಣ. ಇವರೇ ಮನೆಗೆ ದೊಡ್ಡವರು. ಈ ವಿಚಾರ ಮೊನ್ನೆ ನಡೆದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ರಿವೀಲ್ ಆಯಿತು.
ಕರ್ಪೂರದ ಗೊಂಬೆ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶರಣ್, ತಮ್ಮ 100 ನೇ ಚಿತ್ರ ರ್ಯಾಂಬೊ ಮೂಲಕ ಪೂರ್ಣ ಪ್ರಮಾಣದ ನಟರಾದರು. ಅಧ್ಯಕ್ಷ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಫುಲ್ಪ್ಲೆಡ್ಜ್ ನಾಯಕನಾಗಿ ಕಾಣಿಸಿಕೊಂಡಿರುವ ಅವರು ಸದ್ಯ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ರಿಲೀಸ್ಗೆ ಎದುರು ನೋಡುತ್ತಿದ್ದಾರೆ. ಇತ್ತ ನಟಿ ಶೃತಿ ಅವರು ಕೂಡ ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ತಮ್ಮದೆ ಅಭಿಮಾನಿಗಳ ವರ್ಗ ಸೃಷ್ಟಿಸಿಕೊಂಡಿದ್ದಾರೆ.