ETV Bharat / sitara

ಮತ್ತೆ ತೆರೆ ಮೇಲೆ ಬರಲಿದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಜೋಡಿ.. - CHEMISTRY OF KARIAPPA PAIR AGAIN

ಕೆಮಿಸ್ಟ್ರಿ ಆಫ್​ ಕರಿಯಪ್ಪ ಜೋಡಿ ಪ್ರೇಕ್ಷಕರನ್ನು ರಂಜಿಸಲು ಮತ್ತೆ ತೆರೆಗೆ ಬರುತ್ತಿದೆ.

CHEMISTRY OF KARIAPPA PAIR AGAIN
ಮತ್ತೆ ಬರಲಿದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಜೋಡಿ..
author img

By

Published : Apr 1, 2020, 2:04 PM IST

ಕಳೆದ ವರ್ಷದ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ನಿರ್ಮಾಪಕರ ಪಾಲಿಗೆ ‘ಏಕನಾಮಿಕ್ಸ್’ ಅಲ್ಲಿ ಸಹ ಗೆದ್ದಿತು. ಅರ್ಥಾತ್ ಕೆಮಿಸ್ಟ್ರಿ ಆಫ್ ಕರಿಯಪ್ಪ ಹಣ ತಂದುಕೊಟ್ಟಿತು. ಹಾಸ್ಯ ನಟ ತಬಲಾ ನಾಣಿ ಹಾಗೂ ಅಪೂರ್ವ ಜೋಡಿ ಸಹ ಹಿಟ್ ಆಗಿತ್ತು. ಈಗ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಈ ಜೋಡಿ ಒಂದಾಗಿದೆ.

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ನಾಯಕ ಚಂದನ್ ಆಚಾರ್ ಹಾಗೂ ನಾಯಕಿ ಸಂಜನ ಆನಂದ್ ಸಹ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಾಡಿಕೆ ಅಂತೆ ಹಿಟ್ ಆದ ಜೋಡಿಗಳನ್ನು ಮುಂದುವರೆಸಿವುದು ಮಾಯಲೋಕದ ನಿರ್ಧಾರ. ಟೆನ್ನಿಸ್ ಕೃಷ್ಣ ಹಾಗೂ ರೇಖಾ ದಾಸ್ ಕಾಮಿಡಿ ಜೋಡಿ 100 ಸಿನಿಮಾಗಳಲ್ಲಿ ಅಭಿನಯಿಸಿದ್ದು ಒಂದು ರೆಕಾರ್ಡ್ ಸಹ ಆಗಿದೆ. ಆದರೆ ಈಗ ತಬಲಾ ನಾಣಿ ಹಾಗೂ ಅಪೂರ್ವ ಜೋಡಿ ಮತ್ತೆ ‘ಪ್ರೆಸೆಂಟ್ ಪ್ರಪಂಚ 0% ಲವ್’ ಚಿತ್ರದಲ್ಲೂ ತಮ್ಮ ಕೆಮೆಸ್ಟ್ರಿ ಮುಂದುವರೆಸಲಿದೆ.

CHEMISTRY OF KARIAPPA PAIR AGAIN
ಕೆಮಿಸ್ಟ್ರಿ ಆಫ್ ಕರಿಯಪ್ಪ ಜೋಡಿ

ತಬಲಾ ನಾಣಿ ಅವರ ಪಾತ್ರವನ್ನು ಈ ‘ಪ್ರೆಸೆಂಟ್ ಪ್ರಪಂಚ 0% ಲವ್’ ಚಿತ್ರದಲ್ಲಿ ಗೌಪ್ಯವಾಗಿ ಇಡಲಾಗಿದೆ. ಫ್ರೆಂಡ್ಸ್ ಮೀಡಿಯಾ ಪ್ರೊಡಕ್ಷನ್ ಅಡಿಯಲ್ಲಿ ಕೃಷ್ಣಮೂರ್ತಿ ಹಾಗೂ ರವಿಕುಮಾರ್ ಈ ಚಿತ್ರವನ್ನೂ ನಿರ್ಮಾಣ ಮಾಡಿದ್ದಾರೆ.

ಸಂಯುಕ್ತ-2 ಸಿನಿಮಾದ ಅಭಿರಾಮ್ ಅವರ ಎರಡನೇ ನಿರ್ದೇಶನವಿದು. ರವಿ ತೇಜಸ್ವಿ ಸಂಗೀತ, ಈಶ್ವರಿ ಸುರೇಶ್ ಛಾಯಾಗ್ರಹಣ, ವೆಂಕಿ ಸಂಕಲನವಿದೆ.

ಅಂದು ಸಂಯುಕ್ತ-2 ಹಾಗೂ ಕೆಮಿಸ್ಟ್ರಿ ಆಫ್ ಕರಿಯಪ್ಪ ನಿರ್ಮಾಣ ಮಾಡಿದವರು ಅರ್ಜುನ್ ಮಂಜುನಾಥ್ ಈ ಚಿತ್ರದ ನಾಯಕ. ಯಶಸ್ ಅಭಿ, ಸಂಭ್ರಮ ಶ್ರೀ, ಅಕ್ಷತ ಸಹ ಈ ಸೆಂಟಿಮೆಂಟ್, ಕಾಮಿಡಿ, ಲವ್​ ಹಾಗೂ ಕೌಟುಂಬಿಕ ಸಿನಿಮಾದಲ್ಲಿದ್ದಾರೆ.

ಲಯೆಂದ್ರ, ಎಸ್ ನಾರಾಯಣ್, ಓಂ ಪ್ರಕಾಶ್ ರಾವ್, ಚಂದನ್ ಆಚಾರ್, ಸಂಜನ, ಗೋವಿಂದೆ ಗೌಡ, ಉಮೇಶ್ ಪುಂಗ ಪೋಷಕ ಪಾತ್ರಗಳಲ್ಲಿ ಇದ್ದಾರೆ.

ಕುಂಗ್ ಫೂ ಚಂದ್ರು, ಅಲ್ಟಿಮೇಟ್ ಶಿವು ಸಾಹಸ, ಹರಿಕೃಷ್ಣ ನೃತ್ಯ ಹಾಗೂ ಈ ಚಿತ್ರಕ್ಕೆ ಮೂರು ಹಾಡುಗಳನ್ನು ಡಾ.ವಿ.ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.