ರ್ಯಾಪರ್, ಗಾಯಕ ಚಂದನ್ ಶೆಟ್ಟಿ ಗುರುವಾರ ಗಂಗಾವತಿಯ ಐತಿಹಾಸಿಕ ತಾಣ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದರು.
ಬೆಂಗಳೂರಿನಿಂದ ಸ್ನೇಹಿತರೊಂದಿಗೆ ಆಗಮಿಸಿದ್ದ ಚಂದನ್ ಶೆಟ್ಟಿ ಹೊಸಪೇಟೆಯ ವಸತಿ ಗೃಹದಲ್ಲಿ ತಂಗಿದ್ದರು. ಹೊಸಪೇಟೆಯ ಸ್ನೇಹಿತರೊಂದಿಗೆ ಕೂಡಿ ಅಂಜನಾದ್ರಿಗೆ ಭೇಟಿ ನೀಡಿ ವಿಶೇಷ ಪೊಜೆ ಸಲ್ಲಿಸಿದರು.


ಚಂದನ್ ಶೆಟ್ಟಿ ಅವರು ಎರಡು ದಿನಗಳ ಹಿಂದಷ್ಟೇ ನಿವೇದಿತಾ ಗೌಡ ಅವರೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.