ಕೇವಲ ಎರಡು ವಾರ ಇರುವ ಬಿಗ್ ಬಾಸ್ ಮನೆಯ ಸದಸ್ಯರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಬಿಗ್ ಬಾಸ್ ಪ್ರಾರಂಭದ ಹಂತದಲ್ಲಿ ಯಾರೆಲ್ಲ ಸ್ಪರ್ಧಿಗಳು ಮನೆಯಲ್ಲಿ ಜಾಸ್ತಿ ದಿನ ಉಳಿಯುವುದಿಲ್ಲ ಎಂದು ಪ್ರೇಕ್ಷಕರು ಅಂದುಕೊಂಡಿದ್ದರೋ ಅವರೇ ಮನೆಯಲ್ಲಿ ಹೆಚ್ಚು ದಿನ ಉಳಿದುಕೊಳ್ಳುತ್ತಿದ್ದಾರೆ. ಅಂತವರ ಸಾಲಿನಲ್ಲಿ ಚಂದನ್ ಆಚಾರ್ ಕೂಡ ಒಬ್ಬರು.
ಪ್ರಾರಂಭದ ದಿನಗಳಿಂದ ಈವರೆಗೆ ಬರೋಬ್ಬರು 11 ಬಾರಿ ಚಂದನ್ ನಾಮಿನೇಟ್ ಆಗಿದ್ದಾರೆ. ಇವರ ವರ್ತನೆ ಬಿಗ್ ಬಾಸ್ ಮನೆಯಲ್ಲಿ ಕೆಲ ಬಾರಿ ಕೋಲಾಹಲ ಉಂಟು ಮಾಡಿತ್ತು.
ವಿಶೇಷ ಏನಂದ್ರೆ ಈ ವಾರ ನಾಮೀನೇಟ್ ಆದ ಸ್ಪರ್ಧಿಗಳಲ್ಲಿ ಅತಿ ಹೆಚ್ಚು ವೋಟ್ ಪಡೆದ ಮೊದಲ ಸ್ಪರ್ಧಿ ಚಂದನ್. ಅಲ್ಲದೆ ಎಲಿಮೆನೇಷನ್ನಿಂದ ಸೇಫ್ ಆಗಿದ್ದಾರೆ. ಚಂದನ್ ಆಚಾರ್ ತಾಯಿ ಮನೆಯೊಳಗೆ ಬಂದ ನಂತರ ಚಂದನ್ ಕೊಂಚ ಬದಲಾಗಿದ್ದಾರೆ. ತಾಯಿ ಹೇಳಿದ ಮಾತುಗಳು ಮನಸ್ಸಿನಲ್ಲಿ ಬೇರೂರಿರುವ ಲಕ್ಷಣಗಳು ಗೋಚರವಾಗುತ್ತಿವೆ. ಇತ್ತೀಚೆಗೆ ಕೋಪ ಕಡಿಮೆ ಮಾಡಿಕೊಂಡು ಎಲ್ಲರೊಂದಿಗೆ ನಗುತ್ತಿರುವ ಚಂದನ್ಗೆ ಈ ವಾರದ ಕಿಚ್ಚನ ಚಪ್ಪಾಳೆ ಸಹ ಸಿಕ್ಕಿದೆ.
ಬಿಗ್ ಬಾಸ್ ಆಟ ಮುಗಿಯುತ್ತಾ ಬಂದಂತೆ ನೋಡುಗರ ಕುತೂಹಲ ಇಮ್ಮಡಿಯಾಗುತ್ತಿದೆ. ಇಷ್ಟು ದಿನಗಳ ಕಾಲ ಎಲ್ಲರನ್ನು ಕಾಡಿಸುತ್ತಿದ್ದ ಚಂದನ್ ಆಚಾರ್ ಫೈನಲ್ಗೂ ಬಂದ್ರೂ ಆಶ್ಚರ್ಯ ಇಲ್ಲ ಅಂತಾರೆ ಬಿಗ್ ಬಾಸ್ ನೋಡುಗರು.