ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ ಟಗರು ಸಿನಿಮಾ ರಿಲೀಸ್ ಆಗಿ ವರ್ಷಗಳೇ ಕಳೆಯುತ್ತಿವೆ. ಆದ್ರೆ ಈ ಸಿನಿಮಾದ ಹಾಡುಗಳನ್ನು ಮಾತ್ರ ಇನ್ನೂ ಯಾರೂ ಮರೆತಿಲ್ಲ. ಅದರಲ್ಲೂ 'ಟಗರು ಬಂತು ಟಗರು' ಹಾಡಿನ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ.
ಶಿವಣ್ಣ ಥೀಮ್ ಸ್ಟೆಪ್ ಹಾಕಿದ ಟಗರು ಬಂತು ಟಗರು ಹಾಡು ಯೂಟ್ಯೂಬ್ನಲ್ಲಿ ಹೊಸ ರೆಕಾರ್ಡ್ ಬರೆಯಲು ರೆಡಿಯಾಗಿದೆ. 'ಟಗರು' ಸಿನಿಮಾದ ಟೈಟಲ್ ಸಾಂಗ್ ಯೂಟ್ಯೂಬ್ನಲ್ಲಿ 50 ಮಿಲಿಯನ್ ಜನರು ನೋಡುವ ಮೂಲಕ ಹೆಸರು ಮಾಡಿದೆ. 2018 ಏಪ್ರಿಲ್ 23ರಂದು ಈ ಹಾಡು ಪಿಆರ್ಕೆ ಆಡಿಯೋ ಮೂಲಕ ಬಿಡುಗಡೆ ಆಗಿತ್ತು. ಈ ಹಾಡನ್ನು ವಿ.ನಾಗೇಂದ್ರ ಪ್ರಸಾದ್ ಬರೆದಿದ್ದು, ಚರಣ್ ರಾಜ್ ಸಂಗೀತ ನೀಡಿದ್ದರು. ತಮಿಳಿನ ಜಾನಪದ ಗಾಯಕ ಆಂಟೋನಿ ದಾಸ್ ಈ ಹಾಡಿನ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದರು. ಮೊದಲು ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿ 42 ಮಿಲಿಯನ್ ಹಿಟ್ಸ್ ಪಡೆದುಕೊಂಡಿತ್ತು. ಈಗ ವಿಡಿಯೋ ಹಾಡಿಗೆ 50 ಮಿಲಿಯನ್ ಹಿಟ್ಸ್ ಸಿಕ್ಕಿದೆ.
- " class="align-text-top noRightClick twitterSection" data="">
ವಿಶೇಷ ಅಂದರೆ ಪಿಆರ್ಕೆ ಆಡಿಯೋದಲ್ಲಿ ಬಿಡುಗಡೆಯಾಗಿ ಅತಿ ಹೆಚ್ಚು ವೀಕ್ಷಿಸಿರುವ ಹಾಡು ಇದಾಗಿದೆ. 1.37 ಲಕ್ಷಕ್ಕೂ ಹೆಚ್ಚು ಮಂದಿ ಹಾಡನ್ನು ಯೂಟ್ಯೂಬ್ನಲ್ಲಿ ಲೈಕ್ ಮಾಡಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ವಿದೇಶಗಳಲ್ಲೂ ಈ ಹಾಡಿನ ಅಬ್ಬರ ಜೋರಾಗಿತ್ತು. ಸದ್ಯಕ್ಕೆ ಈ ಹಾಡಿನ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಜ್ಕುಮಾರ್, ನನ್ನ ಸಿನಿಮಾದ ಹಾಡನ್ನು ಮಿಲಿಯನ್ ಮಂದಿ ನೋಡಿದ್ದಾರಾ ಎಂದು ಅಚ್ಚರಿ ವ್ಯಕ್ತಪಡಿಸಿದ್ರು. ಇದರ ಎಲ್ಲಾ ಕ್ರೆಡಿಟ್ ನಿರ್ದೇಶಕ ದುನಿಯಾ ಸೂರಿ, ಸಂಗೀತ ನಿರ್ದೇಶಕ ಚರಣ್ ರಾಜ್, ಗಾಯಕ ಆಂಟೋನಿ ದಾಸ್ ಮತ್ತು ನಿರ್ಮಾಪಕ ಕೆ.ಪಿ. ಶ್ರೀಕಾಂತ್ಗೆ ಸೇರುತ್ತೆ. ಇದೇ ಜೋಷ್ನಲ್ಲಿ ಟಗರು-2 ಸಿನಿಮಾಕ್ಕೆ ಕಾಯುತ್ತಿದ್ದೇನೆ ಅಂತ ಶಿವಣ್ಣ ಹೇಳಿದರು.