ಸ್ಯಾಂಡಲ್ವುಡ್ನಲ್ಲಿ ಟ್ರೈಲರ್ ಹಾಗೂ ಹಾಡುಗಳಿಂದಲೇ ಹೈಪ್ ಕ್ರಿಯೇಟ್ ಮಾಡಿದ್ದ ಬೈಟು ಲವ್ ಸಿನಿಮಾ ಇಂದು ರಾಜ್ಯಾದ್ಯಾಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಪ್ರೇಕ್ಷಕರಿಂದಲೂ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.
ಬೈಟು ಲವ್ ಸಿನಿಮಾ ಹೊಸ ಅನುಭವ ನೀಡುತ್ತೆ. ಪ್ರೀತಿ, ವ್ಯಾಮೋಹದ ನಡುವೆ ಅಪ್ಪ-ಅಮ್ಮನ ಸಂಬಂಧದ ಮೌಲ್ಯಗಳನ್ನ ಒಳಗೊಂಡಿರುವ ಕಥೆಯೇ ಬೈಟು ಲವ್ ಸಿನಿಮಾದ ಕಥೆ. ನಿರ್ದೇಶಕ ಹರಿ ಸಂತೋಷ್ ಮದುವೆ ಮಹತ್ವ ಮತ್ತು ಸಂಬಂಧಗಳ ನಡುವಿನ ಕಥೆಯನ್ನು ರೊಮ್ಯಾಂಟಿಕ್ ಆಗಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಬಜಾರ್ ಸಿನಿಮಾದಲ್ಲಿ ಮಾಸ್ ನಟನಾಗಿ ಕಾಣಿಸಿಕೊಂಡಿದ್ದ ಧನ್ವೀರ್ ಈ ಚಿತ್ರದಲ್ಲಿ ಫ್ಯಾಮಿಲಿ ಹೀರೋ ಆಗಿ ಇಷ್ಟ ಆಗ್ತಾರೆ. ಇನ್ನು ಲೀಲಾ ಪಾತ್ರದಲ್ಲಿ ಕಿಸ್ ಸಿನಿಮಾ ಸುಂದರಿ ಶ್ರೀಲೀಲಾ ಪ್ರೇಯಿಸಿ ಜೊತೆಗೆ ಮಗುವನ್ನು ನೋಡಿಕೊಳ್ಳುವ ತಾಯಿ ಪಾತ್ರದಲ್ಲಿ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ.
ಶ್ರೀಲೀಲಾ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿರೋದು ವಿಶೇಷ. ಎರಡು ವರ್ಷದ ಪುಟಾಣಿ ಆರೋವ್ ಪ್ರಮುಖ ಹೈಲೈಟ್. ಇನ್ನು ಬಾಲು ತಂದೆ ಪಾತ್ರದಲ್ಲಿ ಅಚ್ಯುತ್ ಕುಮಾರ್, ಶ್ರೀಲೀಲಾ ತಾಯಿ ಪಾತ್ರದಲ್ಲಿ ಪವಿತ್ರಾ ಲೋಕೇಶ್ ಅವರು ಚಿತ್ರದಲ್ಲಿ ಗಮನ ಸೆಳೆಯುತ್ತಾರೆ. ಇನ್ನು ಉಳಿದಂತೆ ಸಾಧುಕೋಕಿಲ,ರಂಗಾಯಣ ರಘು, ಶಿವರಾಜ್ ಕೆ ಆರ್ ಪೇಟೆ, ಕಡೂರ್ ಧರ್ಮಣ್ಣ, ನಟ ಜಹಾಂಗೀರ್ ಕೊಟ್ಟ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾರೆ.
ಅಲೆಮಾರಿ, ಡವ್, ಕಾಲೇಜ್ ಕುಮಾರ್ ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳಿ ಸಕ್ಸಸ್ ಕಂಡಿರುವ ನಿರ್ದೇಶಕ ಹರಿ ಸಂತೋಷ್, ವಿದೇಶಗಳಲ್ಲಿ ಮದುವೆಗೂ ಮುಂಚೆ ಅಪ್ಪ-ಅಮ್ಮನಾಗುವ ಸಂಸ್ಕೃತಿ ಇದೆ. ಇದೇ ಕಾನ್ಸೆಪ್ಟ್ ಅನ್ನು ನಮ್ಮ ಭಾರತೀಯ ಸಂಸ್ಕೃತಿ ಒಪ್ಪಿಕೊಳ್ಳುತ್ತಾ ಎಂಬುದನ್ನು ತೋರಿಸಿದ್ದಾರೆ. ಕಥೆಗೆ ಮತ್ತಷ್ಟು ಕಿಕ್ ಕೊಡೋದು ಅಜನೀಶ್ ಲೋಕನಾಥ್ ಅವರು ನೀಡಿದ ಸಂಗೀತ. ಅಲ್ಲದೇ ಬ್ಯಾಕ್ ರೌಂಡ್ ಮ್ಯೂಜಿಕ್ ಬೈಟು ಲವ್ ಚಿತ್ರಕ್ಕೆ ಹೈಲೆಟ್ಸ್.
ಇದರ ಜೊತೆಗೆ ಮಹೇನ್ ಸಿಂಹ ಕ್ಯಾಮೆರಾ ಕೈಚಳಕ ಹಾಗೂ ಯೋಗಾನಂದ್ ಸಂಭಾಷಣೆ ಪ್ರೇಕ್ಷಕರನ್ನು ರಂಜಿಸುತ್ತೆ. ಇನ್ನು ಕನ್ನಡದ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ಅಡಿ,ನಿಶಾ ವೆಂಕಟ್ ಕೆೋಣಂಕಿ ಒಂದು ಪಕ್ಕಾ ಔಟ್ ಅಂಡ್ ಔಟ್ ಫ್ಯಾಮಿಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇವತ್ತಿನ ಕಾಲದಲ್ಲಿ ಸಂಬಂಧಗಳ ಮೌಲ್ಯಗಳು ದೂರ ಆಗುತ್ತಿರುವ ಸಮಯದಲ್ಲಿ, ಒಮ್ಮೆ ಬೈಟು ಲವ್ ಸಿನಿಮಾ ನೋಡಿದರೆ ಜೀವನಕ್ಕೆ ಒಂದು ಅರ್ಥ ಸಿಗುತ್ತದೆ.