ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜ್ಯ ಅರಣ್ಯ ಇಲಾಖೆ ರಾಯಭಾರಿಯಾಗಿದ್ದು ಆಗ್ಗಾಗ್ಗೆ ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಇದೀಗ ಬಂಪರ್ ಹುಡುಗ ಧನ್ವೀರ್ ಕೂಡಾ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಿ ಬಂದಿದ್ದಾರೆ.
'ಬಜಾರ್' ಸಿನಿಮಾ ಮೂಲಕ ಗಾಂಧಿನಗರದಲ್ಲಿ ಭರವಸೆ ಮೂಡಿಸಿದ ಧನ್ವೀರ್ ಈಗ ಒಂದಲ್ಲಾ ಒಂದು ವಿಚಾರಕ್ಕೆ ಗಮನ ಸೆಳೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪೌರ ಕಾರ್ಮಿಕರನ್ನು ಮನೆಗೆ ಕರೆದು ಅವರ ಕಾಲು ತೊಳೆದು ಸನ್ಮಾನಿಸಿದ್ದರು. ಇದೀಗ ಕಾಡಿನಲ್ಲಿ ಸುತ್ತು ಹಾಕಿ ಎಂಜಾಯ್ ಮಾಡಿ ಬಂದಿದ್ದಾರೆ. ದಟ್ಟ ಅರಣ್ಯದ ನಡುವೆ ನೆಲೆಸಿರುವ ಮಾವುತರು ಹಾಗೂ ಅವರ ಮಕ್ಕಳೊಂದಿಗೆ ಧನ್ವೀರ್ ಕೆಲ ಹೊತ್ತು ಕಾಲ ಕಳೆದಿದ್ದಾರೆ.
![Dhanveer in Bandipur](https://etvbharatimages.akamaized.net/etvbharat/prod-images/50079592_1997033817032294_569547250821234688_n_2809newsroom_1601285314_148.jpg)
ದರ್ಶನ್ ಅವರಂತೆ ಪ್ರಾಣಿ ಪಕ್ಷಿಗಳನ್ನು ಇಷ್ಟಪಡುವ ಧನ್ವೀರ್, ಆನೆ ಮೇಲೆ ಕುಳಿತು ಸವಾರಿ ಮಾಡಿದ್ದಾರೆ. ಜೊತೆಗೆ ಗಜರಾಜನ ಆಶೀರ್ವಾದ ಪಡೆದು ಖುಷಿ ಪಟ್ಟಿದ್ದಾರೆ. ಧನ್ವೀರ್ ಬಂಡೀಪುರ ಫಾರೆಸ್ಟ್ಗೆ ತೆರಳಿದ್ದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಧನ್ವೀರ್ ಸದ್ಯಕ್ಕೆ 'ಬಂಪರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.