'ಮುಟ್ಟುದ್ರೆ ಹೊಂಟೋಯಿತ್ಯ ಓಡಿ.. ಹಿಂಗಾದ್ರ ಹೆಂಗಾಯ್ತ್ಯೋ ಡ್ಯಾಡಿ.. ಅಂತ ಬ್ರಹ್ಮಚಾರಿ ಸತೀಶ್ಗೆ ಅದಿತಿ ಪ್ರಭುದೇವ ಕಿಚಾಯಿಸುತ್ತಿದ್ದಾರೆ. ಇದು 'ಬ್ರಹ್ಮಚಾರಿ' ಚಿತ್ರದ ಹಾಡಿನ ಲೈನ್ ಆಗಿದ್ದು, ಅದಿತಿ ಹಾಗೂ ಸತೀಶ್ ಈ ಹಾಡಿಗೆ ಫುಲ್ ಜೋಶ್ನಿಂದ ಕುಣಿದು ಕುಪ್ಪಳಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಈ ಹಾಡಿನ ಮೂಲಕ 'ಬ್ರಹ್ಮಚಾರಿ' ಚಿತ್ರದ ಶೂಟಿಂಗ್ ಮುಗಿದಿದ್ದು, ನಿನ್ನೆ ಈ ಹಾಡಿನ ಲಿರಿಕಲ್ ವಿಡಿಯೋ ಕೂಡಾ ಬಿಡುಗಡೆಯಾಗಿದೆ. ಧರ್ಮ ವಿಶ್ ಸಂಗೀತ ನೀಡಿರುವ ಈ ಹಾಡಿಗೆ ಭರ್ಜರಿ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ಕಲರ್ಫುಲ್ ಸೆಟ್ನಲ್ಲಿ ಚಿತ್ರೀಕರಿಸಲಾಗಿದೆ. ನವೀನ್ ಸಜ್ಜು ಹಾಗೂ ಸಂಗೀತ ನಿರ್ದೇಶಕ ಧರ್ಮವಿಶ್ ಜುಗಲ್ ಬಂಧಿ ಸಖತ್ ಆಗಿ ವರ್ಕ್ ಔಟ್ ಆಗಿದೆ. ಮುರಳಿ ಮಾಸ್ಟರ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. 'ಅಯೋಗ್ಯ' ಚಿತ್ರದ ನಂತರ ಈ ಚಿತ್ರದ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎಂದು ನೀನಾಸಂ ಸತೀಶ್ ತಿಳಿಸಿದರು. ಇನ್ನು ಅದಿತಿ ಪ್ರಭುದೇವ ಮಾತನಾಡಿ, ಈ ಹಾಡನ್ನು ಮೊದಲ ಬಾರಿ ಕೇಳಿದಾಗ ನನಗೆ ಅರ್ಥ ಆಗಲಿಲ್ಲ. 3-4 ಬಾರಿ ಕೇಳಿದಾಗ ಅರ್ಥ ಆಯಿತು ಎಂದು ಹೇಳಿದ್ದಾರೆ.
- " class="align-text-top noRightClick twitterSection" data="">
'ಲೂಸಿಯಾ' ನಂತ್ರ ಸತೀಶ್ ನೀನಾಸಂ ಹಾಗೂ ನವೀನ್ ಸಜ್ಜು ಈ ಹಾಡಿನಲ್ಲಿ ಮತ್ತೆ ಒಂದಾಗಿದ್ದಾರೆ. 'ಲೂಸಿಯಾ' ನಂತರ ನನ್ನ ಧ್ವನಿಗೆ ಸೂಟ್ ಆಗುವಂತ ಸತೀಶ್ ಅವರ ಚಿತ್ರದ ಹಾಡು ಸಿಕ್ಕಿರಲಿಲ್ಲ. ಆರು ವರ್ಷಗಳ ನಂತರ ನಾನು ಮತ್ತೆ ಸತೀಶ್ ಅವರ ಚಿತ್ರಕ್ಕೆ ಹಾಡಿದ್ದೀನಿ ಈ ಹಾಡನ್ನು ಕೂಡಾ ಜನರು ಬಹಳ ಎಂಜಾಯ್ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ನಮ್ಮ ಜೋಡಿ ಮುಂದುವರೆಯಲಿದೆ ಎಂದು ನವೀನ್ ಸಜ್ಜು ಅಭಿಪ್ರಾಯ ವ್ಯಕ್ತಪಡಿಸಿದರು. 'ಬ್ರಹ್ಮಚಾರಿ' ಚಿತ್ರವನ್ನು ಉದಯ್ ಕೆ, ಮೆಹ್ತಾ ನಿರ್ಮಿಸಿದ್ದು ಚಂದ್ರಮೋಹನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.