ಇತ್ತೀಚೆಗೆ ಬಿ-ಟೌನ್ನಲ್ಲಿ ಹೊಸ ಹೊಸ ಸಿನಿಮಾಗಳು ತೆರೆ ಕಾಣುತ್ತಿದ್ದು, ಪ್ರೇಕ್ಷಕನ ಮನ ಸೂರೆ ಮಾಡುತ್ತಿವೆ. ಇದೇ ಸಾಲಿನಲ್ಲಿ ತೆರೆ ಕಾಣಲು ತವಕಿಸುತ್ತಿರುವ ಬಾಲಿವುಡ್ನ ವಾರ್ ಸಿನಿಮಾ ಇದೀಗ ತನ್ನ ಫಸ್ಟ್ ಹಾಡು ಬಿಡುಗಡೆ ಮಾಡಿದೆ.
ಗುಂಗ್ರೋ ಎಂಬ ಸಾಂಗ್ ಬಿಡುಗಡೆ ಮಾಡಿರುವ ಚಿತ್ರ ತಂಡ ಪ್ರೇಕ್ಷಕನಿಗೆ ಸಿನಿಮಾದ ಮೇಲಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಈ ಹಾಡಿನಲ್ಲಿ ಹೃತಿಕ್ ರೋಷನ್ ಮತ್ತು ವಾಣಿ ಕಪೂರ್ ಹೆಜ್ಜೆ ಹಾಕಿದ್ದು ಹಾಡು ಹಾಟ್ ಮೂಡಿನಲ್ಲಿದೆ.
- " class="align-text-top noRightClick twitterSection" data="
">
ಇಡೀ ಹಾಡನ್ನು ಬೀಚ್ ಸುತ್ತ ಮುತ್ತ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದು, ಪಡ್ಡೆ ಹುಡುಗರಿಗೆ ಹುಚ್ಚೆಬ್ಬಿಸುವಂತಿದೆ. ಇನ್ನು ಗುಂಗ್ರೋ ಸಾಂಗ್ ಅನ್ನು ಅರಿಜಿತ್ ಸಿಂಗ್ ಮತ್ತು ಶಿಲ್ಪ ರಾವ್ ಹಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಸಿದ್ಧಾರ್ಥ್, ಹೃತಿಕ್ ಮತ್ತು ವಾಣಿ ಜೋಡಿ ತೆರೆಯ ಮೇಲೆ ಹೊಸತನವನ್ನು ಮೂಡಿಸಿದೆ. ಈ ಇಬ್ಬರ ಜೋಡಿ ತುಂಬಾ ಸೊಗಸಾಗಿ ಕಾಣುತ್ತದೆ. ಮತ್ತು ಸಿನಿಮಾದಲ್ಲಿ ನೃತ್ಯವು ಕೂಡಾ ಮನಮೋಹಕವಾಗಿದೆ ಎಂದಿದ್ದಾರೆ.
- " class="align-text-top noRightClick twitterSection" data="">
ಈ ಸಿನಿಮಾವನ್ನು ಬರೋಬ್ಬರಿ 200 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದು, ಸಿನಿಮಾಕ್ಕೆ ಸಿದ್ಧಾರ್ಥ್ ಆಕ್ಷನ್ ಕಟ್ ಹೇಳಿದ್ದಾರೆ. ಹಾಗೂ ಆದಿತ್ಯ ಕಪೂರ್ ನಿರ್ಮಾಣ ಮಾಡುತ್ತಿದ್ದು, ಅಕ್ಟೋಬರ್ 2 ರಂದು ತೆರೆ ಕಾಣುವ ಸಾಧ್ಯತೆಗಳಿವೆ.
ಇನ್ನು ಹಾಡು ಬಿಡುಗಡೆಯಾಗಿರುವ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿರುವ ನಾಯಕ ಹೃತಿಕ್ ರೋಷನ್, ಈ ಸಿನಿಮಾ ಹಿಂದಿ, ತಮಿಳು, ಮತ್ತು ತೆಲುಗಿನಲ್ಲಿ ತೆರೆ ಕಾಣಲಿದೆ ಎಂದಿದ್ದಾರೆ.