ಪಾಟ್ನಾ: 2020ರ ಜೂನ್ 14 ರಂದು ಇಹಲೋಕ ತ್ಯಜಿಸಿದ ಬಾಲಿವುಡ್ನ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ 36ನೇ ಹುಟ್ಟುಹಬ್ಬ ಇಂದು. ನೆಚ್ಚಿನ ನಟ ಅಗಲಿದ್ದರೂ ಕೂಡ ದೇಶದೆಲ್ಲೆಡೆ ಸುಶಾಂತ್ ಅಭಿಮಾನಿಗಳು ಅವರನ್ನು ನೆನೆದು ಜನ್ಮದಿನಕ್ಕೆ ಶುಭ ಕೋರುತ್ತಿದ್ದಾರೆ.
ಬಾಲಿವುಡ್ನ ಪ್ರತಿಭಾವಂತ ನಟರಲ್ಲಿ ಸುಶಾಂತ್ ಸಿಂಗ್ ಕೂಡ ಒಬ್ಬರು. ಜನವರಿ 21, 1986 ರಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಜನಿಸಿದ ಸುಶಾಂತ್ ಸಿಂಗ್ ರಜಪೂತ್ ತಮ್ಮ ಅದ್ಭುತ ನಟನಾ ಕೌಶಲ್ಯದಿಂದ ಬಾಲಿವುಡ್‌ನಲ್ಲಿ ಮಿಂಚಿದರು.
ದೆಹಲಿಯಲ್ಲಿ ಇಂಜಿನಿಯರ್ ಓದುತ್ತಿರುವಾಗಲೇ ಸುಶಾಂತ್ ಮುಂಬೈನ ಬದಿರಾ ಬಬ್ಬಾರ್ ನಾಟಕ ಕ್ಷೇತ್ರಕ್ಕೆ ಸೇರಿಕೊಂಡರು. ನಂತರ ಅದೃಷ್ಟವೆಂಬಂತೆ ಏಕ್ತಾ ಕಪೂರ್ ನಿರ್ದೇಶನದ 'ಪವಿತ್ರ ರಿಷ್ತಾ' ಧಾರಾವಾಹಿ ಮೂಲಕ ಭಾರತದ ತುಂಬೆಲ್ಲಾ ಕಿರುತೆರೆಯ ನೆಚ್ಚಿನ ನಟರಾದರು.
2013ರಲ್ಲಿ 'ಕೋಯಿ ಪೋ ಚೆ' ಚಿತ್ರದೊಂದಿಗೆ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟರು. ಆ ಮೇಲೆ ಅಮೀರ್ ಖಾನ್ ಅಭಿನಯದ ರಾಜ್ ಕುಮಾರ್ ಹಿರಾನಿ ನಿರ್ದೇಶನದ 'ಪಿಕೆ' ಚಿತ್ರದಲ್ಲಿ ಸರ್ಫರಾಜ್ ಪಾತ್ರದಿಂದ ಸುಶಾಂತ್ಗೆ ಅವಕಾಶಗಳ ಬಾಗಿಲು ತೆರೆಯಿತು. ಬಳಿಕ 'ಎಂ ಎಸ್ ಧೋನಿ' ಬಯೋಪಿಕ್ ಸಿನಿಮಾದ ಮೂಲಕ ದೇಶವ್ಯಾಪಿಯಾಗಿ ಅಭಿಮಾನಿಗಳನ್ನು ಸಂಪಾದಿಸಿದ ಯುತ್ ಐಕಾನ್ ಎಂದರೆ ತಪ್ಪಾಗಲಾರದು.
- " class="align-text-top noRightClick twitterSection" data="
">
ಜಾಹಿರಾತು:-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಗುರುವಿಲ್ಲದೆ ಗುರಿ ತಲುಪಿದ ಅಸಾಧಾರಣ ಯುವಕ ಸುಶಾಂತ್ ಸಿಂಗ್ ರಜಪೂತ್, ಈಗಿನ ಅದೆಷ್ಟೋ ಉದಯೋನ್ಮುಖ ನಟರಿಗೆ ಮಾದರಿ. 2020ರ ಜೂನ್ 14 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಸಿಂಗ್ ಪ್ರಕರಣದ ತನಿಖೆ ಮುಂದುವರೆದಿದ್ದು, ಅವರ ನೆನಪುಗಳು ನಮ್ಮಲ್ಲಿ ಸದಾ ಜೀವಂತ.