ಬಿಗ್ಬಾಸ್ ಮನೆಯಲ್ಲಿ ಈ ವಾರ ಅತ್ಯಂತ ಸವಾಲಿನ ವಾರವಾಗಿದ್ದು, ಕ್ಯಾಪ್ಟನ್ ದಿವ್ಯಾ ಸುರೇಶ್, ಅರವಿಂದ್ ಹಾಗೂ ವೈಷ್ಣವಿ ಹೊರತುಪಡಿಸಿ ಉಳಿದೆಲ್ಲ ಸದಸ್ಯರು ನಾಮಿನೇಟ್ ಆಗಿದ್ದಾರೆ.
ಈ ವಾರದಿಂದ ಮನೆಯಲ್ಲಿ ಕಡಿಮೆ ಸದಸ್ಯರು ಉಳಿದುಕೊಂಡಿದ್ದಾರೆ. ಹೀಗಾಗಿ, ವೈಯಕ್ತಿಕ ಆಟ ಆಡುವಂತೆ ಬಿಗ್ಬಾಸ್ ಎಲ್ಲಾ ಸದಸ್ಯರಿಗೂ ಸೂಚಿಸುವುದರ ಜೊತೆಗೆ ಈ ವಾರದ ನಾಮಿನೇಷನ್ ಪ್ರಕ್ರಿಯೆಯನ್ನು ವಿಭಿನ್ನವಾಗಿ ಮಾಡಿದರು.
ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ಆಕ್ಟಿವಿಟಿ ಏರಿಯಾದಲ್ಲಿದ್ದ ಡಬ್ಬಕ್ಕೆ ತಮ್ಮ ನಾಮಿನೇಷನ್‌ಗಳನ್ನು ಕಾರ್ಡ್ ಮೇಲೆ ಬರೆದು ಹಾಕಬೇಕಿತ್ತು. ಹಾಗೆಯೇ ನಾಮಿನೇಟ್ ಮಾಡಿದ್ದಕ್ಕೆ ಸೂಕ್ತ ಕಾರಣವನ್ನೂ ನೀಡಬೇಕಿತ್ತು. ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಶಮಂತ್, ಶುಭಾ ಪೂಂಜಾ, ದಿವ್ಯಾ ಉರುಡುಗ ನಾಮಿನೇಟ್ ಆದರು. ಚಕ್ರವರ್ತಿ ಚಂದ್ರಚೂಡ್ ಮೊದಲೇ ನಾಮಿನೇಟ್ ಆಗಿದ್ದರಿಂದ, ಅವರನ್ನೂ ಸೇರಿ ಒಟ್ಟು ಐವರು ನಾಮಿನೇಷನ್‌ನಲ್ಲಿದ್ದಾರೆ.
ಆದರೆ, ಕ್ಯಾಪ್ಟನ್ ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು ಮಂಜು ಪಾವಗಡ ಅವರನ್ನು ನಾಮಿನೇಷನ್ ಪ್ರಕ್ರಿಯೆಯಿಂದ ಸೇವ್ ಮಾಡಿದ್ದಾರೆ. ಬಿಗ್ಬಾಸ್ ನೀಡಿರುವ ನೀನಾ - ನಾನಾ ಟಾಸ್ಕ್ನಲ್ಲಿ ಪ್ರತಿಯೊಬ್ಬ ಸದಸ್ಯರು ವೈಯಕ್ತಿಕ ಆಟವನ್ನು ಆಡಿ, ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಇಡೀ ವಾರ ಆಟ ಆಡಿ ಕೊನೆಯ ಸ್ಥಾನ ಪಡೆಯುವ ಸ್ಪರ್ಧಿ ನೇರವಾಗಿ ನಾಮಿನೇಟ್ ಆಗುತ್ತಾರೆ.
ಇದನ್ನೂ ಓದಿ: ಮಿಸ್ ಇಂಡಿಯಾ ಯುಎಸ್ಎ -2021: ಪ್ರಶಸ್ತಿ ಮುಡಿಗೇರಿಸಿಕೊಂಡ ವೈದೇಹಿ