ETV Bharat / sitara

ಕಿಚ್ಚ ಸುದೀಪ್​ಗೆ ಅನಾರೋಗ್ಯ: ಬಿಗ್​ಬಾಸ್​​ ಮನೆಗೆ ವಾರಾಂತ್ಯದ ನಿರೂಪಕರಾಗಿ ಮತ್ತೊಬ್ಬರು ಎಂಟ್ರಿ!? - Sudeepa suffering from illness

ಕನ್ನಡದ ರಿಯಾಲಿಟಿ ಶೋ ಬಿಗ್​ಬಾಸ್​ ನಡೆಸಿಕೊಡುವ ಕಿಚ್ಚ ಸುದೀಪ್​ಗೆ ಅನಾರೋಗ್ಯ ಕಾಣಿಸಿಕೊಂಡಿರುವ ಕಾರಣ ವಾರಾಂತ್ಯದಲ್ಲಿ ಅವರು ನಿರೂಪಕರಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Bigg Boss kichcha Sudeepa
Bigg Boss kichcha Sudeepa
author img

By

Published : Apr 15, 2021, 7:02 PM IST

ಸ್ಯಾಂಡಲ್​ವುಡ್​ ನಟ, ಬಿಗ್​ ಬಾಸ್​ ನಿರೂಪಕ ಕಿಚ್ಚ ಸುದೀಪ್​ ಅನಾರೋಗ್ಯದಿಂದ ಬಳಲುತ್ತಿದ್ದು, ಹೀಗಾಗಿ ಈ ವಾರಾಂತ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಗ್​ಬಾಸ್​ ಮನೆಗೆ ಬೇರೆ ನಿರೂಪಕರು ಬರುವ ಸಾಧ್ಯತೆ ದಟ್ಟವಾಗಿದೆ.

ಈ ವಾರಾಂತ್ಯದ 'ವಾರದ ಕಥೆ ಕಿಚ್ಚನ ಜೊತೆ' ಹಾಗೂ ಸೂಪರ್ 'ಸಂಡೇ ವಿತ್ ಸುದೀಪ್' ಕಾರ್ಯಕ್ರಮ ಕಿಚ್ಚ ಸುದೀಪ್​ ನಡೆಸಿಕೊಡುತ್ತಿದ್ದರು. ಆದರೆ, ಇದೀಗ ಅವರಲ್ಲಿ ಅನಾರೋಗ್ಯ ಕಾಣಿಸಿಕೊಂಡಿರುವ ಕಾರಣ ಈ ವಾರಂತ್ಯದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ವಾಹಿನಿಯ ಮೂಲಗಳು ತಿಳಿಸಿವೆ.

Bigg Boss kichcha Sudeepa
ಬಿಗ್​ಬಾಸ್​ ಮನೆಯಲ್ಲಿ ಕಿಚ್ಚ ಸುದೀಪ್​

ಪ್ರತಿ ಶನಿವಾರ 2 ಎಪಿಸೋಡ್​ಗಳ ಶೂಟಿಂಗ್ ನಡೆಯುತ್ತಿತ್ತು. ಆದರೆ, ಇದೀಗ ಸುದೀಪ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿರುವ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ವಾಹಿನಿ ಮೂಲಗಳ ಪ್ರಕಾರ ಶನಿವಾರ ಹಾಗೂ ಭಾನುವಾರ ಹೆಚ್ಚಿನ ಚಟುವಟಿಕೆ ನೀಡಲಿದ್ದು, ಎಂದಿನಂತೆ ಭಾನುವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಆದರೆ, ನಿರೂಪಣೆಗಾಗಿ ಯಾರನ್ನು ಕರೆಯಿಸಬೇಕು ಅಥವಾ ಕರೆಯಿಸಬಾರದು ಎಂಬುದರ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಒಂದು ವೇಳೆ, ಭಾನುವಾರ ಎಲಿಮಿನೇಷನ್​ ಕಾರ್ಯಕ್ರನ ನಡೆಯದಿದ್ದರೆ, ಮುಂದಿನ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಹೋಗಲಿದ್ದಾರೆ.

ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆ ಹಾಗೂ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಎಚ್ಚರಿಕೆ ತೆಗೆದುಕೊಂಡಿದ್ದು, ಸುದೀಪ್ ಅವರು ಶೂಟಿಂಗ್​ಗೆ ಹಾಜರಾಗುತ್ತಿಲ್ಲ. ಪ್ರತಿ ಶನಿವಾರದಂದು ಸುದೀಪ್ ಸೇರಿದಂತೆ ಬಿಡದಿ ಬಳಿಯ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಡೆಯುತ್ತಿರುವ ಬಿಗ್ ಬಾಸ್ ವಾರಂತ್ಯದ ಕಾರ್ಯಕ್ರಮಗಳಿಗೆ ತೆರಳುವ ಪ್ರತಿಯೊಬ್ಬರಿಗೂ ಆರ್​ಟಿಪಿಸಿಆರ್​ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಲಾಗುತ್ತಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.