ETV Bharat / sitara

Bigg Boss Kannada: ಸುದೀಪ್​ ಮುಂದೆ ಹೇಳಿದ ಮಾತು ಮರೆತು ಈ ಕೆಲಸ ಮಾಡಿದ ಪಾವಗಡ!

ಸುದೀಪ್​ ಜತೆ ವೇದಿಕೆ ಹಂಚಿಕೊಂಡಿದ್ದ ವೇಳೆ ಮಾತನಾಡಿದ್ದ ಮಂಜು ಪಾವಗಡ, ಯಾರ್​ ಜೊತೆ ಹೇಗೆ ಇರಬೇಕು ಎಂಬುದು ಅರ್ಥವಾಗಿದೆ. ಕಳೆದ ಬಾರಿ ಮಾಡಿದ ತಪ್ಪನ್ನು ಈ ಸಲ ಮಾಡಲ್ಲ ಎಂದಿದ್ದರು.

bigg boss kannada
bigg boss kannada
author img

By

Published : Jun 24, 2021, 3:08 PM IST

ಕನ್ನಡ ಬಿಗ್​ಬಾಸ್​​​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ ನಿನ್ನೆಯಿಂದ ಭರ್ಜರಿಯಾಗಿ ಆರಂಭಗೊಂಡಿದ್ದು, ದೊಡ್ಮನೆಗೆ 12 ಅಭ್ಯರ್ಥಿಗಳು ಲಗ್ಗೆ ಹಾಕಿದ್ದಾರೆ. ಈ ಹಿಂದೆ ಹೆಚ್ಚಾಗಿ ದಿವ್ಯಾ ಸುರೇಶ್ ಜತೆ ಕಾಣಿಸಿಕೊಂಡಿದ್ದ ಮಂಜು ಪಾವಗಡ ಈ ಸಲ ಸಿಂಗಲ್ ರೈಡ್ ಹೋಗುತ್ತೇನೆ ಎಂದು ಸುದೀಪ್​ ಮುಂದೆ ಹೇಳಿದ್ದರು. ಆದರೆ ಮನೆಯೊಳಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಂತೆ ಮತ್ತೊಮ್ಮೆ ದಿವ್ಯಾ ಪರವಾಗಿ ವಹಿಸಿಕೊಂಡು ಮಾತನಾಡಲು ಶುರು ಮಾಡಿದ್ದಾರೆ.

ಮತ್ತೊಮ್ಮೆ ಆರಂಭಗೊಂಡಿರುವ ಬಿಗ್​ ಬಾಸ್​ ಎರಡನೇ ಇನಿಂಗ್ಸ್​ಗೆ ವೀಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ನಾಮಿನೇಷನ್ ಆದ ನಂತರ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳ ಬಗ್ಗೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿ ಕಮೆಂಟ್ ಮಾಡಿದ್ದಾರೆ. ಎಂದಿನಂತೆ ಕೆಲವರು ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಜೊತೆಗೆ ಮಂಜು ಪಾವಗಡ ಬಗ್ಗೆಯೂ ಈ ಬಾರಿ ಹೆಚ್ಚು ಕಮೆಂಟ್​ಗಳು ಕೇಳಿಬರುತ್ತಿವೆ.

Manju
ಮಂಜು ಪಾವಗಡ

ಹೌದು, ಬಿಗ್​ಬಾಸ್ ಅಭಿಮಾನಿಗಳಿಗೆ ಗೊತ್ತಿರುವ ಹಾಗೆ ಕಳೆದ ಬಾರಿ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಇಬ್ಬರೂ ಬಹಳ ಕ್ಲೋಸ್ ಆಗಿದ್ದರು. ಈ ಬಗ್ಗೆ ವೇದಿಕೆಯ ಮೇಲೆ ಮಂಜು ಅವರಿಗೆ ಸುದೀಪ್ ಪರೋಕ್ಷವಾಗಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ್ದ ಪಾವಗಡ “ನಾನು ಈ ಬಾರಿ ಸಿಂಗಲ್ ರೈಡ್ ಹೋಗುತ್ತೇನೆ” ಎಂದು ಹೇಳಿದ್ದರು. ಆದರೆ ಇದೀಗ ಬಿಗ್ ಮನೆಯೊಳಗೆ ಹೋಗುತ್ತಿದ್ದಂತೆ ಮತ್ತೆ ದಿವ್ಯಾ ಅವರನ್ನು ವಹಿಸಿಕೊಂಡು ಮಾತನಾಡುತ್ತಿರುವುದು ನೋಡಿ ಕೆಲವರಿಗೆ ಕನ್​ಫ್ಯೂಶನ್ ಶುರುವಾಗಿದೆ. ಜತೆಗೆ ರಾತ್ರಿಯಾಗುತ್ತಿದ್ದಂತೆ ಆ್ಯಕ್ಟಿವಿಟಿ ಏರಿಯಾದಲ್ಲಿ ಮಂಜು ಹಾಗೂ ದಿವ್ಯಾ ಸುರೇಶ್ ಪರಸ್ಪರ ಕುಳಿತು ಮಾತನಾಡಿಕೊಳ್ಳುತ್ತಿದ್ದರು. ದಿವ್ಯಾ ಅವರಿಂದ ದೂರ ಉಳಿಯುವ ಬಗ್ಗೆ ಮಾತನಾಡಿದ್ದ ಮಂಜು, ಮತ್ತೆ ಇಬ್ಬರು ಕುಳಿತುಕೊಂಡು ಮಾತನಾಡಿದ್ದು ಪ್ರೇಕ್ಷಕರಲ್ಲಿ ಗೊಂದಲ ಮೂಡಿಸಿದೆ.

ದಿವ್ಯಾ ಸುರೇಶ್​
ದಿವ್ಯಾಸುರೇಶ್​

ಇದನ್ನೂ ಓದಿರಿ: ಪಾಪರಾಜಿ ಕ್ಯಾಮರಾ ಕಣ್ಣಿಗೆ ಬಿದ್ದ ಬಾಲಿವುಡ್​ ತಾರೆಯರು

ಅದೇನೇ ಇರಲಿ, ಮುಂದಿನ ವಾರ ಕಳೆಯುವುದರಲ್ಲಿ ಎಲ್ಲರ ಮುಖವಾಡ ಹೊರಬರಲಿದೆ. ಅಭ್ಯರ್ಥಿಗಳ ನಿಜವಾದ ಆಟ ಇದೀಗ ಶುರುವಾಗಲಿದೆ ಎನ್ನುತ್ತಿದ್ದಾರೆ ಕೆಲವು ಪ್ರೇಕ್ಷಕರು. ನಾಮಿನೇಷನ್ ಸಂದರ್ಭದಲ್ಲಿ ದಿವ್ಯಾ ಸುರೇಶ್ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಮಾತನಾಡಿರುವ ವಿರುದ್ಧ ಸಹ ಅನೇಕರು ಕಿಡಿಕಾರಿದರು. ಬಿಗ್​ಬಾಸ್ ಎರಡನೇ ಇನಿಂಗ್ಸ್​ನಲ್ಲಿ ದಿವ್ಯಾ ಸುರೇಶ್, ದಿವ್ಯಾ ಉರುಡುಗ, ವೈಷ್ಣವಿ ಗೌಡ, ಪ್ರಿಯಾಂಕಾ ತಿಮ್ಮೇಶ್, ಅರವಿಂದ್ ಕೆ.ಪಿ, ಚಕ್ರವರ್ತಿ ಚಂದ್ರಚೂಡ್, ಶುಭಾ ಪೂಂಜಾ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ರಘು ಗೌಡ, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ ಸೇರಿದಂತೆ ಒಟ್ಟು 12 ಸ್ಪರ್ಧಿಗಳು ತೆರಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.