ETV Bharat / sitara

ಬಿಗ್​ಬಾಸ್​ ಮನೆಗೆ ಸುಶಾಂತ್​ ಗರ್ಲ್​ಫ್ರೆಂಡ್​ ರಿಯಾ: ಪ್ರತಿ ವಾರಕ್ಕೆ 35 ಲಕ್ಷ ರೂ. ಸಂಭಾವನೆ? - ಬಿಗ್​ಬಾಸ್​ ಮನೆಗೆ ಸುಶಾಂತ್​ ಗರ್ಲ್​ಫ್ರೆಂಡ್​ ರಿಯಾ

ಬಿಗ್​ಬಾಸ್​ ಹೊಸ ಸೀಸನ್ ಅಕ್ಟೋಬರ್ 2 ರಿಂದ ಪ್ರಸಾರವಾಗಲಿದ್ದು, ಸ್ಪರ್ಧಿಗಳು ಯಾರೆಂಬುದರ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ. ಇದರ ಮಧ್ಯೆ ರಿಯಾ ಚಕ್ರವರ್ತಿ ಕೂಡ ದೊಡ್ಮನೆ ಪ್ರವೇಶ ಮಾಡಲಿದ್ದಾರೆಂಬ ಮಾಹಿತಿ ಹರಿದಾಡುತ್ತಿದೆ.

Rhea Chakraborty
Rhea Chakraborty
author img

By

Published : Sep 29, 2021, 8:23 PM IST

15ನೇ ಆವೃತ್ತಿಯ ಹಿಂದಿ ಬಿಗ್​​ಬಾಸ್​ ಆರಂಭಗೊಳ್ಳಲು ಈಗಾಗಲೇ ಮುಹೂರ್ತ ಫಿಕ್ಸ್​​​ ಆಗಿದ್ದು, ಅಕ್ಟೋಬರ್​ 2ರಿಂದ ಪ್ರಸಾರಗೊಳ್ಳಲಿದೆ. ಬಿಗ್​ಬಾಸ್​ ಮನೆಗೆ ಯಾವೆಲ್ಲ ಸ್ಫರ್ಧಿಗಳು ಹೋಗಲಿದ್ದಾರೆಂಬ ಮಾಹಿತಿ ರಿವೀಲ್​ ಆಗಿದ್ದರೂ ಇನ್ನೂ ದೃಢವಾಗಿಲ್ಲ. ಇದರ ಮಧ್ಯೆ ಮತ್ತೊಂದು ಸುದ್ದಿ ವೈರಲ್​ ಆಗಲು ಶುರುವಾಗಿದೆ.

ಇದನ್ನೂ ಓದಿ: ಬಿಗ್​ಬಾಸ್-15ರ ಸ್ಪರ್ಧಿಗಳು ಇವ್ರೇನಾ?.. ಒಮ್ಮೆ ನೋಡಿ ಬಿಡಿ!

ಈ ಸಲದ ಬಿಗ್​ಬಾಸ್​ ಮನೆಗೆ ಬಾಲಿವುಡ್ ದಿ.ನಟ ಸುಶಾಂತ್ ಸಿಂಗ್ ರಜಪೂತ್​ ಸ್ನೇಹಿತೆ​​​ ರಿಯಾ ಚಕ್ರವರ್ತಿ ಹೋಗಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಪ್ರತಿ ವಾರ ಅವರು 35 ಲಕ್ಷ ರೂ. ಸಂಭಾವನೆ ರೂಪದಲ್ಲಿ ಆಫರ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಬಿಗ್​ಬಾಸ್​ ಕೂಡ ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ. ಇನ್ನು ಈ ಸಲದ ಬಿಗ್​ಬಾಸ್​ ಕಾರ್ಯಕ್ರಮ ನಿರೂಪಣೆ ಮಾಡಲು ಬಾಲಿವುಡ್​ ನಟ ಸಲ್ಮಾನ್​ ಖಾನ್​ 350 ಕೋಟಿ ರೂ. ಪಡೆದುಕೊಂಡಿದ್ದಾರೆಂಬ ಮಾಹಿತಿ ಕೂಡ ಇದೆ.

ಇದನ್ನೂ ಓದಿ: ಬಿಗ್‌ಬಾಸ್‌ 15: 14 ವಾರ ನಡೆಯುವ ಶೋಗೆ ₹350 ಕೋಟಿ ಪಡೆದರೇ ಸಲ್ಮಾನ್ ಖಾನ್?

ಈ ಸಲದ ಬಿಗ್​ಬಾಸ್​​ನಲ್ಲಿ ಕರಣ್ ಕುಂದ್ರಾ​, ಶಮಿತಾ, ನಿಶಾಂತ್ ಭಟ್​​​, ತೇಜಸ್ವಿನಿ ಪ್ರಕಾಶ್​​​, ಉಮರ್​, ಪ್ರತೀಕ್​, ಸಿಂಬಾ ನಾಗ್​​ಪಾಲ್​, ಅಫ್ಸಾನ್, ಡೋನಾಲ್​, ಆಕಾಶ್ ಸಿಂಗ್​​​​ ಪ್ರವೇಶ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.