ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುಕೋಟಿ ವೆಚ್ಚದ ಕುರುಕ್ಷೇತ್ರ ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನಾಗಿ ದರ್ಶನ್ ಅಬ್ಬರಿಸಿದ್ದು, ಬೆಳ್ಳಿತೆರೆ ಮೇಲೆ ಸುಯೋಧನನ ಅಬ್ಬರವನ್ನು ನೋಡಲು ಡಿ ಬಾಸ್ ಭಕ್ತಗಣ ಕಾತುರದಿಂದ ಕಾಯುತ್ತಿದೆ.
ಅಲ್ಲದೆ ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಬಳಿ ದರ್ಶನ್ ಸುಯೋಧನ ಪಾತ್ರದ 40 ಅಡಿ ಕಟೌಟ್ ತಲೆಯೆತ್ತಿದೆ. ಕುರುಕ್ಷೇತ್ರ ಚಿತ್ರದ ಬಿಡುಗಡೆಗೆ ನಾಲ್ಕು ದಿನಗಳು ಬಾಕಿ ಇರುವಾಗಲೇ ದರ್ಶನ್ ಅಭಿಮಾನಿಗಳು ದುರ್ಯೋಧನನ ಕಟೌಟ್ ಅನ್ನು ಚಿತ್ರಮಂದಿರದ ಬಳಿ ನಿಲ್ಲಿಸಿದ್ದು, ಕುರುಕ್ಷೇತ್ರದ ಕನವರಿಕೆಯಲ್ಲಿದ್ದಾರೆ.
ಈ ಚಿತ್ರದಲ್ಲಿ ದರ್ಶನ್ ಜೊತೆ ಅಂಬರೀಶ್ ಭೀಷ್ಮನ ಪಾತ್ರದಲ್ಲಿ ಕಾಣಿಸಿದ್ದು, ಅಂಬಿ ಕಟೌಟ್ ಕೂಡ ದಚ್ಚು ಕಟೌಟ್ ಜೊತೆ ತಲೆ ಎತ್ತಿದೆ. ಅಲ್ಲದೆ ಹೊಸಕೋಟೆಯಲ್ಲೂ ದರ್ಶನ್ ಹಾಗೂ ಅಂಬರೀಶ್ 44 ಅಡಿ ಎತ್ತರದ ಕಟೌಟ್ ಈಗಾಗಲೇ ತಲೆಯೆತ್ತಿದ್ದು, ದಚ್ಚು ಅಭಿಮಾನಿಗಳು ಕಟೌಟ್ಗೆ ಹೂವಿನ ಹಾರ ಹಾಕಿ ಹಾಗೂ ಪಟಾಕಿಸಿಡಿಸಿ ಅದ್ದೂರಿಯಾಗಿ ದುರ್ಯೋಧನನನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.