ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಪಣ ತೊಟ್ಟಿದ್ದು, ಸರ್ಕಾರದ ಜೊತೆ ಕೈ ಜೋಡಿಸಿರುವ ಪೊಲೀಸರು, ಬೀದಿಗಿಳಿದು ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಈ ನಡುವೆ ಬಿಗ್ಬಾಸ್ ವಿಜೇತ ಶೈನ್ ಶೆಟ್ಟಿ ಸಿಟಿ ಪೊಲೀಸರಿಗೆ ಅಗತ್ಯ ವಸ್ತಗಳನ್ನು ವಿತರಣೆ ಮಾಡಿದ್ದಾರೆ.
![Big Boss Winner Shine Shetty distributes groceries to city police](https://etvbharatimages.akamaized.net/etvbharat/prod-images/6591481_thjh.jpg)
ರಾಜ್ಯಾದ್ಯಂತ ಲಾಕ್ಡೌನ್ ಆದೇಶವಿದ್ದು, ಇದರ ಪಾಲನೆಯಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರ ಮಹತ್ವದಾಗಿದೆ. ತಮ್ಮ ಕುಟುಂಬಸ್ಥರನ್ನು ಬಿಟ್ಟು ಜನರ ರಕ್ಷಣೆಗೆ ಮುಂದಾಗಿದ್ದಾರೆ. ಇದನ್ನು ಮನಗಂಡ ಬಿಗ್ಬಾಸ್ ವಿಜೇತ ಶೈನ್ ಶೆಟ್ಟಿ, ದಕ್ಷಿಣಾ ವಿಭಾಗ ಪೊಲೀಸ್ ವ್ಯಾಪ್ತಿಯ ಚೆನ್ನಮ್ಮನಕೆರೆ ಅಚ್ಚುಕಟ್ಟು, ಸುಬ್ರಮಣ್ಯಪುರ,ಹನುಮಂತನಗರ ಪೊಲೀಸರಿಗೆ ದಿನಸಿ ಅಕ್ಕಿ, ಬೇಳೆ, ಎಣ್ಣೆ, ಉಪ್ಪು ದಿನಸಿ ವಸ್ತುಗಳನ್ನು ವಿತರಣೆ ಮಾಡಿ ಅವರ ಕಾರ್ಯಕ್ಕೆ ಧನ್ಯವಾದ ಹೇಳಿದರು.
ಈ ಸಾಮಾಗ್ರಿಗಳಿಂದ ಪೊಲೀಸರು ಠಾಣೆಯಲ್ಲೇ ಆಹಾರ ತಯಾರಿಸಿ ತಮಗೆ ಹಾಗೂ ಬಡವರಿಗೂ ಆಹಾರ ಪೂರೈಕೆ ಮಾಡಲು ನಿರ್ಧಾರ ಮಾಡಿದ್ದಾರೆ. ಇನ್ನು ಶೈನ್ ಕಾರ್ಯಕ್ಕೆ ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
![Big Boss Winner Shine Shetty distributes groceries to city police](https://etvbharatimages.akamaized.net/etvbharat/prod-images/6591481_tddhjh.jpg)