ಬಿಗ್ ಬಾಸ್ ಮನೆಯಲ್ಲಿ ವಾರದಿಂದ ವಾರಕ್ಕೆ ಕುತೂಹಲ ಕೆರಳುತ್ತಲೇ ಇದೆ. ಈಗಾಗಲೆ ಬಿಗ್ ಬಾಸ್ ಮನೆಯಿಂದ ಗುರುಲಿಂಗ ಸ್ವಾಮಿಗಳು, ಚೈತ್ರಾ ಮತ್ತು ದುನಿಯಾ ರಶ್ಮಿ ಹೊರ ಬಂದಿದ್ದಾರೆ. ಆದ್ರೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಏಳು ಮಂದಿ ನಾಮಿನೇಟ್ ಆಗಿದ್ದಾರೆ.
ಈ ವಾರದ ನಾಮಿನೇಷನ್ ವಿಭಿನ್ನವಾಗಿದ್ದು, ತಮಗಾಗದವರನ್ನು ಮನೆಯಿಂದ ಹೊರ ಕಳುಹಿಸಲು ಅವರ ಭಾವಚಿತ್ರಗಳನ್ನು ಉರಿಯುವ ಬೆಂಕಿಗೆ ಹಾಕುವ ಮೂಲಕ ಮನೆಯ ಸದಸ್ಯರು ನಾಮಿನೇಷನ್ ಪ್ರಕ್ರಿಯೆಯನ್ನು ಮುಗಿಸಿದ್ದಾರೆ. ಇದ್ರಲ್ಲಿ ಭೂಮಿ ಶೆಟ್ಟಿ, ಚೈತ್ರಾ ಕೋಟೂರ್, ದೀಪಿಕಾ, ಚಂದನ್ ಆಚಾರ್, ಶೈನ್ ಶೆಟ್ಟಿ, ಪ್ರಿಯಾಂಕಾ ಹಾಗೂ ರಾಜು ತಾಳಿ ಕೋಟೆ ಇದ್ದಾರೆ.
ಮನೆಯಲ್ಲಿ ಸದಸ್ಯರು ಗ್ರೂಪಿಸಮ್ ಮಾಡಿಕೊಂಡು ನಾಮಿನೇಟ್ ಮಾಡುತ್ತಿದ್ದಾರೆ ಎಂಬುದು ಪ್ರೇಕ್ಷಕನಿಗೆ ತಿಳಿಯದ ವಿಷಯವಲ್ಲ ಎಂಬುದನ್ನು ಗುಂಪುಗಾರರು ತೋರಿಸಿಕೊಂಡಿದ್ದಾರೆ. ಕಳೆದ ವಾರದ ಟಾಸ್ಕ್‌ನಲ್ಲಿ ಗೆದ್ದು ಹರೀಶ್ ರಾಜ್ ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಚಂದನ ಈ ವೇಳೆ ಹರೀಶ್ ಅವರಿಗೆ ಪುಷ್ಫಗುಚ್ಛ ನೀಡಿ ಸ್ವಾಗತಿಸಿದರು. ಆಗ ಹರೀಶ್ ಮಗಳ ಧ್ವನಿ ಕೇಳಿಸಲಾಯಿತು. ಮಗಳ ಧ್ವನಿ ಕೇಳುತ್ತಿದ್ದಂತೆಯೇ ಹರೀಶ್ ಭಾವುಕರಾಗಿ ಕಣ್ಣೀರು ಹಾಕಿದರು.
ಟ್ರೋಲ್ ಆಗುತ್ತಿರುವ ಆರ್ ಜೆ ಪೃಥ್ವಿ
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಪ್ರವೇಶಿಸಿರುವ ಪೃಥ್ವಿ ತಮ್ಮ ವಿಭಿನ್ನ ಗೆಟಪ್ ಮೂಲಕ ಗಮನಸೆಳೆಯುತ್ತಿದ್ದಾರೆ. ಅದರಲ್ಲೂ ಅವರ ಬಟ್ಟೆಯ ಬಗ್ಗೆಯೇ ಹೆಚ್ಚು ಟ್ರೋಲ್ ಆಗುತ್ತಿದೆ. ಮೀಸೆ ಹಾಗೂ ಕೂದಲಿನ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಗರು ಕಾಲೆಳೆಯುತ್ತಿದ್ದಾರೆ.