ಭಾರತ ಇತಿಹಾಸದಲ್ಲಿ ದಳವಾಯಿ ದಂಗೆ ಎಂದೂ ಮಾಸದ ಅಧ್ಯಾಯಗಳು. ಆ ವೇಳೆ ನಡೆದ ವೀರ ಹೋರಾಟಗಳು ಇಂದಿಗೂ ಅಜರಾಮರ. ಇದೀಗ ಇಂತಹ ದಳವಾಯಿಗಳ ಕಥೆಯನ್ನೇ ಹೊತ್ತು ಬರುತ್ತಿರುವ ಸಿನಿಮಾ ಬಿಚ್ಚುಗತ್ತಿ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ಹರಿ ಸಂತೋಷ್ ನಿರ್ದೇಶದದಲ್ಲಿ ಮೂಡಿ ಬಂದಿರುವ ಬಿಚ್ಚುಗತ್ತಿ ಸಿನಿಮಾಕ್ಕೆ ಬಿಎಲ್ ವೇಣು ಕಥೆಯನ್ನು ಬರೆದಿದ್ದಾರೆ. ಟ್ರೈಲರ್‌ನಲ್ಲಿ ದಳವಾಯಿ ದಂಗೆಯ ಮೊದಲು ಭಾರತದ ಸ್ಥಿತಿ ಹೇಗಿತ್ತು. ಪಾಳೆಪಟ್ಟುಗಳಲ್ಲಿ ಯಾವ ಪರಿಸ್ಥಿತಿ ಇತ್ತು. ರಾಜರ ಮತ್ತು ಅವರ ಆಡಳಿತ ಹೇಗಿತ್ತು, ಸೈನ್ಯದ ಶಿಸ್ತು ಏನು ಎಂಬುದನ್ನು ತೋರಿಸಲಾಗಿದೆ.
- " class="align-text-top noRightClick twitterSection" data="">
ಚಿತ್ರದಲ್ಲಿ ರಾಜ್ವರ್ಧನ್ ಲೀಡ್ ರೋಲ್ ಪ್ಲೇ ಮಾಡಿದ್ರೆ, ನೀರ್ ದೋಸೆ ಬೆಡಗಿ ಹರಿಪ್ರಿಯಾ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಬಾಹುಬಲಿ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದ ಪ್ರಭಾಕರ್ ಬಿಚ್ಚುಗತ್ತಿಯಲ್ಲಿಯೂ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ನಾದ ಬ್ರಹ್ಮ ಡಾ. ಹಂಸಲೇಖ ಮತ್ತು ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದಾರೆ.