ETV Bharat / sitara

ಯಶಸ್ವಿ 25 ದಿನಗಳನ್ನು ಪೂರೈಸಿದ ಭುವನ್ ಪೊನ್ನಣ್ಣ ಅಭಿನಯದ 'ರಾಂಧವ' - ನಿರ್ದೇಶಕ ಸುನಿಲ್ ಆಚಾರ್ಯ

ಸುನಿಲ್ ಎಸ್​. ಆಚಾರ್ಯ ನಿರ್ದೇಶನದ 'ರಾಂಧವ' ಸಿನಿಮಾ ಯಶಸ್ವಿ 25 ದಿನಗಳನ್ನು ಪೂರೈಸಿದ್ದು ಚಿತ್ರತಂಡ ಸಂತೋಷ ವ್ಯಕ್ತಪಡಿಸಿದೆ. ಅಲ್ಲದೆ ರಾಂಧವ ಸೀಕ್ವೆಲ್ ಮಾಡುವುದಾಗಿ ಕೂಡಾ ನಿರ್ದೇಶಕ ಸುನಿಲ್ ಹಾಗೂ ನಾಯಕ ಭುವನ್ ಪೊನ್ನಣ್ಣ ಹೇಳಿದ್ದಾರೆ.

'ರಾಂಧವ'
author img

By

Published : Sep 17, 2019, 8:12 PM IST

ಬಿಗ್​ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಅಭಿನಯದ 'ರಾಂಧವ' ಭರ್ಜರಿ 25 ದಿನಗಳನ್ನು ಪೂರೈಸಿದೆ. ಬೆಂಗಳೂರಿನಲ್ಲೇ ಸುಮಾರು 6 ಚಿತ್ರಮಂದಿರಗಳಲ್ಲಿ 'ರಾಂಧವ' ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದ್ದು ಚಿತ್ರತಂಡ ಪುಲ್ ಖುಷ್ ಆಗಿದೆ. ಅಲ್ಲದೆ ಇಂದು ಭುವನ್ ತಮ್ಮ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದರು.

'ರಾಂಧವ' ಚಿತ್ರತಂಡ

ತುಮಕೂರು, ರಾಮನಗರ, ಮಂಡ್ಯ ಹಾಗೂ ಹಾಸನದಿಂದ ಬಂದಿದ್ದ ಭುವನ್ ಅಭಿಮಾನಿಗಳು ಭುವನ್​​​​​​​​ಗೆ ಜೈಕಾರ ಹಾಕುವ ಮೂಲಕ 'ರಾಂಧವ' ಸಿನಿಮಾ ನೂರು ದಿನಗಳನ್ನು ಪೂರೈಸಲಿ, ಭುವನ್ ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳನ್ನು ಮಾಡಲಿ ನಾವು ಸದಾ ಅವರ ಬೆನ್ನಿಗೆ ಇರುತ್ತೇವೆ ಎಂದು ಹೇಳಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇನ್ನು ತಮ್ಮ ಸಿನಿಮಾ 25 ದಿನಗಳನ್ನು ಪೂರೈಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಭುವನ್​, ರಾಂಧವ-2 ಸಿನಿಮಾ ಮಾಡುವುದಾಗಿ ಹೇಳಿದರು. ತಮಿಳಿನ ಒಂದು ಚಿತ್ರದಲ್ಲಿ ನಟಿಸುತ್ತಿದ್ದು ಆದಷ್ಟು ಬೇಗ ಕನ್ನಡದಲ್ಲಿ ಹೊಸ ಚಿತ್ರವನ್ನು ಅನೌನ್ಸ್ ಮಾಡುವುದಾಗಿ ತಿಳಿಸಿದರು. ಇನ್ನು ನಿರ್ದೇಶಕ ಸುನಿಲ್ ಆಚಾರ್ಯ ಮಾತನಾಡಿ, ನಮ್ಮ ಸಿನಿಮಾದೊಂದಿಗೆ 'ಸಾಹೋ' ಅಂತಹ ದೊಡ್ಡ ಸಿನಿಮಾ ಬಂದರೂ ಕನ್ನಡಿಗರು 'ರಾಂಧವ' ಸಿನಿಮಾವನ್ನು ಕೈ ಬಿಡಲಿಲ್ಲ. ರಾಜ್ಯಾದ್ಯಂತ ಸುಮಾರು 20 ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡುತ್ತಾ ಪ್ರದರ್ಶನವಾಗುತ್ತಿದೆ. ಅಲ್ಲದೆ ಭುವನ್ ಹೇಳಿದಂತೆ ರಾಂಧವ-2 ಸಿನಿಮಾ ಮಾಡಲು ಈಗಾಗಲೇ ಪ್ಲ್ಯಾನ್ ಮಾಡಿದ್ದೇವೆ. ಸ್ಕ್ರಿಪ್ಟ್​​ ವರ್ಕ್ ಎಲ್ಲಾ ಮುಗಿಸಿ ಶೀಘ್ರದಲ್ಲೇ ರಾಂಧವ-2 ಅನೌನ್ಸ್ ಮಾಡುವುದಾಗಿ ಸುನಿಲ್​​ ತಿಳಿಸಿದರು.

Intro:ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಅಭಿನಯದ " ರಾಂಧವ" ಭರ್ಜರಿ ೨೫:ದಿನಗಳ ಪೂರೈಸಿದೆ.ಬೆಂಗಳೂರಿನಲ್ಲೇ ಸುಮಾರು ೬ ಚಿತ್ರಮಂದಿರಗಳಲ್ಲಿ ರಾಂಧವ ಚಿತ್ರ ಯಶಸ್ವಿಯಾಗಿ ೨೫ ದಿನಗಳಬಪೂರೈಸಿದ್ದು ,ಚಿತ್ರತಂಡ ಪುಲ್ ಖುಷ್ ಆಗಿದೆ,ಅಲ್ಲದೆ ಇಂದು ಭುವನ್ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ರು.

Body:ತುಮಕೂರು, ರಾಮನಗರ,ಮಂಡ್ಯ ,ಹಾಗೂ ಹಾಸನ ದಿಂದ ಬಂದಿದ್ದ ಭುವನ್ ಅಭಿಮಾನಿಗಳು ಭುವನ್ ಗೆ ಜೈಕಾರ ಹಾಕುವ ಮೂಲಕ ರಾಂಧವ ಚಿತ್ರ ನೂರು ದಿನಗಳ ಪೂರೈಸಲಿ,ಅಲ್ಲದೆ ಭುವನ್ ಮುಂದುನ ದಿನಗಳಲ್ಲಿ ಒಳ್ಳೆಯ ಚಿತ್ರಗಳನ್ನು ಮಾಡಲಿ,ನಾವು ಸದಾ ಅವರ ಬೆನ್ನಿಗೆ ಇರುತ್ತೇವೆ ಎಂದು ಹೇಳಿ ರಾಂಧವ ತಂಡಕ್ಕೆ ಶುಭ ಹಾರೈಸಿದ್ರು.

Conclusion:ಇನ್ನೂ ರಾಂಧವ ಚಿತ್ರ ೨೫ ದಿನಗಳ ಪೂರೈಸಿರುವುದಕದಕೆ ಸಂತಸ ವ್ಯಕ್ತಪಡಿಸಿದ ಭುವನ್, ರಾಂಧವ ೨ ಚಿತ್ರ ಮಾಡುವುದಾಗಿಯೂ ಹೇಳಿದ್ರು.ಅಲ್ಲದೆ ತಮಿಳಿನಲ್ಲಿ ಒಂದು ಚಿತ್ರ ಶೂಟಿಂಗ್ ನಡೆಯುತ್ತಿದ್ದು ಆದಷ್ಟು ಬೇಗ ಕನ್ನಡದಲ್ಲಿ ನನ್ನ ಹೊಸ ಚಿತ್ರವನ್ನು ಅನೌನ್ಸ್ ಮಾಡುವುದಾಗಿ ಭುವನ್ ತಿಳಿಸಿದ್ರು.ಅಲ್ಲದೆ ರಾಂಧವ ಚಿತ್ರದ ಸಕ್ಸಸ್ ಗೆ ಪುಲ್ ಖುಷ್ ಆಗಿರುವ ನಿರ್ದೇಶಕ ಶೇಖರ್ ,ನಮ್ಮ ಚಿತ್ರ ರಿಲೀಸ್ ಆದಾಗ ಸಾಹೋ ಅಂತ ಸುನಾಮಿ ಬಂದ್ರು ಸಹ ನಮ್ಮ ಚಿತ್ರವನ್ನು ಕನ್ನಡಿಗರು ಕೈ ಬಿಡಲಿಲ್ಲ, ರಾಜ್ಯಾದ್ಯಂತ ಸುಮಾರು ೨೦ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ರಾಂಧವ ಚಿತ್ರ ಒಳ್ಳೆ ಕಲೆಕ್ಷನ್ ನೊಂದಿಗೆ ಪ್ರದರ್ಶನವಾಗ್ತಿದೆ.ಅಲ್ಲದೆ ಚಿತ್ರದ ಕೊನೆಯಲ್ಲಿ ಹೇಳಿದಂತೆ ರಾಂಧವ ೨ ಚಿತ್ರ ಮಾಡಲು ಈಗಾಗಲೇ ಪ್ಲಾನ್ ಮಾಡಿದ್ದೇವೆ ,ಸ್ಕ್ರಿಪ್ಟ್ ವರ್ಕ್ ಎಲ್ಲ ಮುಗಿಸಿ ಶೀಘ್ರದಲ್ಲೇ ರಾಂಧವ ೨ ಚಿತ್ರವನ್ನು ಅನೌನ್ಸ್ ಮಾಡುವುದಾಗಿ ನಿರ್ದೇಶಕ ಶೇಖರ್ ತಿಳಿಸಿದ್ರು.

ಸತೀಶ ಎಂಬಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.