ETV Bharat / sitara

ರೋರಿಂಗ್ ಸ್ಟಾರ್ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ 'ಭರಾಟೆ' ಚಿತ್ರತಂಡ - ಶ್ರೀಲೀಲಾ

ಭರ್ಜರಿ ಚೇತನ್ ನಿರ್ದೇಶನದ 'ಭರಾಟೆ' ಸಿನಿಮಾ ಈ ಮುನ್ನ ನಿಗದಿಪಡಿಸಿದ ದಿನಾಂಕದಂದು ಬಿಡುಗಡೆಯಾಗುತ್ತಿಲ್ಲ. ಬದಲಿಗೆ ಅಕ್ಟೋಬರ್​​​ನಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಸೆಪ್ಟೆಂಬರ್ 27 ರಂದು ಎ.ಪಿ.ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾ ಬಿಡುಗಡೆಯಾಗಲಿದೆ.​​​​​

ರೋರಿಂಗ್ ಸ್ಟಾರ್
author img

By

Published : Sep 1, 2019, 7:44 AM IST

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ, ಭರ್ಜರಿ ಚೇತನ್ ನಿರ್ದೇಶನದ 'ಭರಾಟೆ' ಚಿತ್ರದ ಅಬ್ಬರ ಸ್ಯಾಂಡಲ್​​ವುಡ್​​​ನಲ್ಲಿ ಜೋರಾಗಿದೆ. ಕಳೆದ ತಿಂಗಳು ಚಿತ್ರತಂಡ ಸ್ವಿಡ್ಜರ್​​ಲ್ಯಾಂಡ್​​​ನಿಂದಲೇ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಮಾಡಿತ್ತು.

kiss
'ಕಿಸ್' ಸಿನಿಮಾ

'ಭರಾಟೆ' ಚಿತ್ರದ ಟೈಟಲ್ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಕೂಡಾ ಸಿಕ್ಕಿದೆ. ಈಗಾಗಲೇ ಶೂಟಿಂಗ್ ಮುಗಿಸಿ ಚಿತ್ರ ಪೋಸ್ಟ್ ಪ್ರೊಡಕ್ಷನ್​​​​​​ನಲ್ಲಿ ಬ್ಯುಸಿ ಇದೆ. ಆದರೆ ಶ್ರೀಮುರಳಿ ಅಭಿಮಾನಿಗಳಿಗೆ ಚಿತ್ರತಂಡದಿಂದ ನಿರಾಶೆ ಸುದ್ದಿಯೊಂದು ಹೊರಬಿದ್ದಿದೆ. ಚಿತ್ರವನ್ನು ಸೆಪ್ಟೆಂಬರ್​​ 27ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಬಹಳ ದಿನಗಳ ಮುನ್ನವೇ ಅನೌನ್ಸ್ ಮಾಡಿತ್ತು. ಆದರೆ ಚಿತ್ರ ಫಿಕ್ಸ್ ಮಾಡಿದ ದಿನಾಂಕದಂದು ಬಿಡುಗಡೆಯಾಗುತ್ತಿಲ್ಲ. ಬದಲಿಗೆ ಅಕ್ಟೋಬರ್​ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದಾರೆ.

ಆದರೆ ಬಲ್ಲ ಮೂಲಗಳ ಪ್ರಕಾರ ಸೆಪ್ಟೆಂಬರ್ 27ರಂದು ಚೇತನ್ ಕುಮಾರ್​​​ ಗುರುಗಳಾದ ಎ.ಪಿ.ಅರ್ಜುನ್ ನಿರ್ದೇಶನದ 'ಕಿಸ್' ಚಿತ್ರ ಬಿಡುಗಡೆ ಆಗುತ್ತಿದ್ದು, ಗುರುಗಳ ಚಿತ್ರಕ್ಕಾಗಿ ಚೇತನ್ 'ಭರಾಟೆ' ಚಿತ್ರವನ್ನು ಎರಡು ವಾರ ಮುಂದೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ 'ಕಿಸ್' ಹಾಗೂ 'ಭರಾಟೆ' ಎರಡೂ ಚಿತ್ರದಲ್ಲೂ ಮೈಸೂರಿನ ಹುಡುಗಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದು, ಎರಡು ಚಿತ್ರಗಳಿಗೂ ಕ್ಲಾಶ್ ಆಗಬಾರದು ಎಂಬ ಕಾರಣಕ್ಕೆ ಭರಾಟೆ ಚಿತ್ರ ಮುಂದೆ ಹೋಗಿದೆ. ಇದರ ಜೊತೆಗೆ ಚಿತ್ರಮಂದಿರಗಳ ಸಮಸ್ಯೆ ಆಗಬಾರದು ಎಂದು ಎರಡೂ ಚಿತ್ರತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ ಎನ್ನಲಾಗುತ್ತಿದೆ.

Intro:ರೋರಿಂಗ್ ಸ್ಟಾರ್ ಆಭಿಮಾನಿಗಳಿಗೆ ನಿರಾಶೆ ಮೂಡಿಸಿದ" ಭರಾಟೆ" ಚಿತ್ರತಂಡ..

ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ ಭರ್ಜರಿ ಚೇತನ್ ನಿರ್ದೇಶನದ "ಭರಾಟೆ" ಚಿತ್ರದ ಸೌಂಡ್ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಜೋರಾಗಿದೆ.ಅಲ್ಲದೆ ಕಳೆದ ತಿಂಗಳು ಚಿತ್ರತಂಡ ಸ್ವಿಜರ್ಲ್ಯಾಂಡ್ ನಿಂದಲೇ "ಭರಾಟೆ" ಚಿತ್ರದ ಟೈಟಲ್ ಸಾಂಗ್ ಲಾಂಚ್ ಮಾಡಿತ್ತು.ಅಲ್ಲದೆ ಈ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕಿದೆ.ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ
ಇರುವ ಭರಾಟೆ ಟೀಂ ನಿಂದ ಸದ್ಯ ರೋರಿಂಗ್ ಸ್ಟಾರ್ ಫ್ಯಾನ್ಸ್ ಗಳಿಗೆ ನಿರಾಶೆಯ ಸುದ್ದಿಯೊಂದುಹೊರಬಿದ್ದಿದೆ.
ಅದೇ‌ನಪ್ಪ ಅಂದ್ರೆ '"ಭರಾಟೆ " ಚಿತ್ರವನ್ನು ಸೆಪ್ಟೆಂಬರ್ ೨೯ ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಒಂದು ತಿಂಗಳ ಹಿಂದೆಯೇ ಅನೌನ್ಸ್ ಮಾಡಿತ್ತು.ಅದರೆ ಈಗ ಭರಾಟೆ ಸಿನಿಮಾ‌‌ ಸೆಪ್ಟೆಂಬರ್ ೨೯ ಕ್ಕೆ ಚಿತ್ರ ಬಿಡುಗಡೆ ಯಾಗ್ತಿಲ್ಲ.Body:.ಬದಲಿಗೆ ಅಕ್ಟೋಬರ್ ಎರಡನೇ ಅಥವ ಮೂರನೇ ವಾರದಲ್ಲಿ ಚಿತ್ರಬಿಡುಗಡೆ ಮಾಡುವುದಾಗಿ ನಿರ್ದೇಶಕ ಚೇತನ್ ಕುಮಾರ್ ಈಟಿವಿ ಭಾರತ್ ಗೆ ತಿಳಿಸಿದ್ದಾರೆ.ಬಲ್ಲ ಮೂಲಗಳ ಪ್ರಕಾರ ಸೆಪ್ಟೆಂಬರ್ ೨೯ ರಂದು ಚೇತನ್ ಗುರುಗಳಾದ ಎಪಿ ಅರ್ಜುನ್ ನಿರ್ದೇಶನದ " ಕಿಸ್" ಚಿತ್ರ ಬಿಡುಗಡೆ ಅಗ್ತಿದ್ದು ಗುರುಗಳ ಚಿತ್ರಕ್ಕಾಗಿ ಚೇತನ್ ಭರಾಟೆ ಚಿತ್ರವನ್ನು ಎರಡುವಾರ ಮುಂದೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.ಅಲ್ಲದೆ ಕಿಸ್ ಹಾಗೂಭರಾಟೆಎರಡುಚಿತ್ರದಲ್ಲೂ
ಮೈಸೂರಿನ ಹುಡ್ಗಿ ಶ್ರೀಲಿಲಾ ನಾಯಕಿಯಾಗಿ ನಟಿಸಿದ್ದು ಎರಡು ಚಿತ್ರಗಳಿಗೂ ಕ್ಲಾಷ್ ಆಗಬಾರದು ಎಂದು ಭರಾಟೆ ಚಿತ್ರ ಮುಂದೆ ಹೋಗಿದೆ.ಇದರ ಜೊತೆಗೆ ಚಿತ್ರಮಂದಿರಗಳ ಸಮಸ್ಯೆ ಆಗಬಾರದು ಎಂದು ಎರಡು ಚಿತ್ರತಂಡಗಳು " ಭರ್ಜರಿ " ಪ್ಲಾನ್ ಮಾಡಿಕೊಂಡಿವೆ..

ಸತೀಶ ಎಂConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.