ETV Bharat / sitara

ಅಣ್ಣಾವ್ರ ಸೂಪರ್ ಹಿಟ್‌ ಸಿನಿಮಾಗೆ ಹೊಸತನ; ನವೆಂಬರ್​ನಲ್ಲಿ 'ಭಾಗ್ಯವಂತರು' ಮರು ಬಿಡುಗಡೆ

1977ರಲ್ಲಿ ರಿಲೀಸ್ ಆಗಿದ್ದ ಡಾ.ರಾಜ್ ಕುಮಾರ್ ಮತ್ತು ಸರೋಜಾದೇವಿ ಅಭಿನಯಿಸಿರುವ ಸೂಪರ್ ಹಿಟ್ ಸಿನಿಮಾ ‘ಭಾಗ್ಯವಂತರು’ ಮುಂದಿನ ತಿಂಗಳು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ.

bhagyavantharu cinema will re release on next month
ನವೆಂಬರ್​ನಲ್ಲಿ ಮತ್ತೆ ರಿಲೀಸ್​ ಆಗಲಿದೆ ''ಭಾಗ್ಯವಂತರು''
author img

By

Published : Oct 22, 2021, 7:18 AM IST

ಡಾ. ರಾಜ್‌ಕುಮಾರ್‌ ಹಾಗೂ ಬಿ. ಸರೋಜಾದೇವಿ ನಟಿಸಿರುವ 'ಭಾಗ್ಯವಂತರು' ಅಭಿಮಾನಿಗಳ ಆಲ್‌ ಟೈಮ್ ಫೇವರಿಟ್‌ ಸಿನಿಮಾ.

1977ರಲ್ಲಿ ದ್ವಾರಕೀಶ್‌ ಚಿತ್ರ ಸಂಸ್ಥೆಯ ಮೂಲಕ ಈ ಚಿತ್ರ ನಿರ್ಮಾಣಗೊಂಡಿತ್ತು. 'ಭಾಗ್ಯವಂತರು' ಸಿನಿಮಾವನ್ನು ಮರು ಬಿಡುಗಡೆ ಮಾಡಲು ಇದೀಗ ಸಕಲ ಸಿದ್ಧತೆ ನಡೆಯುತ್ತಿದೆ. ಈ ಹಿಂದೆ ಸೂಪರ್ ಹಿಟ್ ಆಗಿದ್ದ 'ಭಾಗ್ಯವಂತರು' ಡಿ.ಐ, 7.1 ಟ್ರ್ಯಾಕ್ ಸೇರಿದಂತೆ ಅನೇಕ ನವೀನ ತಂತ್ರಜ್ಞಾನ ಅಳವಡಿಕೆಯೊಂದಿಗೆ ನವೆಂಬರ್‌ನಲ್ಲಿ ರಿ-ರಿಲೀಸ್ ಆಗುತ್ತಿದೆ. ಡಾ.ರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿರುವ ಮುನಿರಾಜ್ ಎಂಬುವವರು ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.

ಈ ಬಗ್ಗೆ ಮುನಿರಾಜು ಮಾತನಾಡಿ, 'ರಾಜಕುಮಾರ್ ಎಂದರೆ ನನ್ನ ಪ್ರಾಣ. 78ನೇ ಇಸವಿಯಿಂದ ನನಗೆ ಕನ್ನಡ ಚಿತ್ರರಂಗದೊಂದಿಗೆ ನಂಟಿದೆ. 18 ವರ್ಷಗಳ ಕಾಲ ವಜ್ರೇಶ್ವರಿ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ಪಾರ್ವತಮ್ಮ ರಾಜಕುಮಾರ್ ಅವರೇ ನನ್ನನ್ನು ಮೊದಲು‌ ಚಿತ್ರಮಂದಿರದ ಆರ್‌ಪಿಯಾಗಿ ನೇಮಕ‌ ಮಾಡಿ ಯಳಂದೂರಿಗೆ ಕಳುಹಿಸಿದ್ದರು. ನಾನು ಮೊದಲು ಮರು ಬಿಡುಗಡೆ ಮಾಡಿದ ಚಿತ್ರ 'ಆಪರೇಷನ್ ಡೈಮಂಡ್ ರಾಕೆಟ್'. ನಂತರ 'ನಾನೊಬ್ಬ ಕಳ್ಳ'.. ಹೀಗೆ ರಾಜಕುಮಾರ್ ಅವರ ನಾಲ್ಕೈದು ಚಿತ್ರಗಳನ್ನು ಮರು ಬಿಡುಗಡೆ ಮಾಡಿದ್ದೇನೆ. ಈಗ ಭಾಗ್ಯವಂತರು ಚಿತ್ರವನ್ನು ಸುಮಾರು 150ಕ್ಕೂ ಹೆಚ್ಚಿನ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇನೆ' ಎಂದರು.

bhagyavantharu cinema will re release on next month

ನಿರ್ದೇಶಕ ಭಾರ್ಗವ ಮಾತನಾಡಿ, 'ನನ್ನ ಮೊದಲ ನಿರ್ದೇಶನದ ಚಿತ್ರ ಭಾಗ್ಯವಂತರು. ದ್ವಾರಕೀಶ್ ಈ ಚಿತ್ರದ ನಿರ್ಮಾಪಕರು. ನಾನು ಆಗಲೇ ರಾಜಕುಮಾರ್ ಅವರು ನಟಿಸಿದ್ದ ಬಬ್ರುವಾಹನ, ನಾ ನಿನ್ನ ಮರೆಯಲಾರೆ, ಜಗ ಮೆಚ್ಚಿದ ಮಗ ಸೇರಿದಂತೆ ಅನೇಕ ಚಿತ್ರಗಳಿಗೆ ನಿರ್ದೇಶನ ಮಾಡಿದ್ದೆ. ಹಾಗಾಗಿ ರಾಜ್ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ. ನನಗೂ ಅವರೆಂದರೆ ಅಷ್ಟೇ ಪ್ರೀತಿ. ನಿರ್ಮಾಪಕ ದ್ವಾರಕೀಶ್ ಹಾಗು ರಾಜಕುಮಾರ್ ಇಬ್ಬರೂ ನೀವೆ ಈ ಚಿತ್ರ ನಿರ್ದೇಶನ ಮಾಡಿ ಎಂದರು. ಹಾಗಾಗಿ 44 ವರ್ಷಗಳ ಹಿಂದೆ ನಾನು ಭಾಗ್ಯವಂತರು ಚಿತ್ರವನ್ನು ನಿರ್ದೇಶಿಸಿದ್ದೆ. ನನ್ನ ಮೊದಲ ನಿರ್ದೇಶನದ ಚಿತ್ರವೇ ಸೂಪರ್ ಹಿಟ್ ಆಯಿತು. ಸದ್ಯ ಮುನಿರಾಜು ನೂತನ ತಂತ್ರಜ್ಞಾನ ಅಳವಡಿಕೆಯೊಂದಿಗೆ ಈ ಚಿತ್ರವನ್ನು ಮರು‌ ಬಿಡುಗಡೆ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ' ಎಂದು ಹಾರೈಸಿದರು.

ಇದನ್ನೂ ಓದಿ: ಹುಟ್ಟುಹಬ್ಬದಂದು ಮನೆ ಬಳಿ ಬರಬೇಡಿ: ಅಭಿಮಾನಿಗಳಲ್ಲಿ ಮನವಿ ಮಾಡಿದ ಪ್ರೇಮ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.