ಸದ್ಯ ಸ್ಯಾಂಡಲ್ವುಡ್ನಲ್ಲಿ ಕಮರ್ಷಿಯಲ್ ಚಿತ್ರಗಳ ಅಬ್ಬರ ಜೋರಾಗಿದೆ. ಈಗ ಇವುಗಳ ಮಧ್ಯೆ ಸದ್ದಿಲ್ಲದೆ "ಭಾಗ್ಯ" ಎಂಬ ಕಾದಂಬರಿ ಆಧಾರಿತ "ಭಾಗ್ಯ ಶ್ರೀ" ಎಂಬ ಮಕ್ಕಳ ಚಿತ್ರ ರೆಡಿಯಾಗಿದೆ. ಅಲ್ಲದೆ ಭಾಗ್ಯಶ್ರೀ ಚಿತ್ರ ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿದ್ದು, ಚಿತ್ರತಂಡ ಚಿತ್ರದ ಆಡಿಯೋ ಬಿಡುಗಡೆ ಮಾಡಿತು.
ಭಾಗ್ಯಶ್ರೀ ಚಿತ್ರ ಸಾಮಾಜಿಕ ಪಿಡುಗಾಗಿ ಬಾಲ್ಯವಿವಾಹದ ಸುತ್ತ ಹೆಣೆದಿರುವ ಚಿತ್ರ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಎಸ್. ಮಲ್ಲೇಶ್ ನಿರ್ದೇಶನವನ್ನು ಮಾಡಿದ್ದಾರೆ. ಇಂಡಸ್ಟ್ರಿಗೆ ಆಫೀಸ್ ಬಾಯ್ ಆಗಿ ಬಂದು ಎಂಟ್ರಿ ಕೊಟ್ಟು ಏನಾದರೂ ಸಾಧನೆ ಮಾಡಬೇಕೆಂಬ ಛಲದೊಂದಿಗೆ ನಿರ್ದೇಶಕ ಮಲ್ಲೇಶ್ ಸಮಾಜದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹದ ಕುರಿತು ಸಾಕಷ್ಟು ಮಾಹಿತಿ ಸಂಗ್ರಹಿಸಿ ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು ಸಂಗ್ರಹಿಸಿ ಭಾಗ್ಯ ಎಂಬ ಕಾದಂಬರಿಯನ್ನು ಬರೆದು ಈಗ ಆ ಕಾದಂಬರಿಯನ್ನೇ ಚಿತ್ರ ರೂಪಕ್ಕೆ ತಂದಿದ್ದಾರೆ.
ನಿರ್ದೇಶಕ ಎಸ್.ಮಲ್ಲೇಶ್ ಅವರ ಈ ಕನಸಿಗೆ ಸಮಾಜ ಸೇವಕರಾದ ಆಶಾ ಶಾಹಿರ ಬೀಳಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರದಲ್ಲಿ ಭಾಗ್ಯಶ್ರೀ ಪಾತ್ರದಲ್ಲಿ ಬೇಬಿ ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವೆಂಕಟೇಶ್ ಸಂಗೀತ ನೀಡಿದ್ದಾರೆ. ಪ್ರೊ. ದೊಡ್ಡರಂಗೇಗೌಡರು ಚಿತ್ರಕ್ಕೆ ಎರಡು ಹಾಡುಗಳನ್ನು ಬರೆದಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದ್ದು ಬಹುತೇಕ ಹೊಸ ಕಲಾವಿದರೇ ನಡೆಸಿದ್ದಾರೆ. ಅಲ್ಲದೆ ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ಕೃಷ್ಣರಾವ್ ಸಹ ನಟಿಸಿದ್ದಾರೆ.