ETV Bharat / sitara

ಕ್ರಾಂತಿವೀರ ಸಿನಿಮಾದ ಬಾಲಕ ಭಗತ್ ಸಿಂಗ್​​ನ ಪೋಸ್ಟರ್ ಬಿಡುಗಡೆ - ಕ್ರಾಂತಿವೀರ ಸಿನಿಮಾದ ಪೋಸ್ಟರ್ ಬಿಡುಗಡೆ

ಇಂದು ಮಾಸ್ಟರ್ ನಿಶಾಂತ್ ಟಿ. ರಾಥೋಡ್ ಹುಟ್ಟುಹಬ್ಬ. ಅದಕ್ಕಾಗಿ ಈ ಬಾಲಕನ ಭಗತ್ ಸಿಂಗ್ ಗೆಟಪ್ ಪೋಸ್ಟರ್ ಫೋಟೋ ಬಿಡುಗಡೆ ಮಾಡಲಾಗಿದೆ.

Bhagat Singh Child Actor Poster Released In KRANTIVEERA Film
ಕ್ರಾಂತಿವೀರ ಸಿನಿಮಾದ ಬಾಲಕ ಭಗತ್ ಸಿಂಗ್ ಪೋಸ್ಟರ್ ಬಿಡುಗಡೆ
author img

By

Published : Oct 22, 2020, 11:07 AM IST

ಕನ್ನಡದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತು ‘ಕ್ರಾಂತಿವೀರ’ ಸಿನಿಮಾ ತಯಾರಾಗುತ್ತಿದೆ. ಅದರಲ್ಲಿ ಅಜಿತ್ ಜಯರಾಜ್ ಭಗತ್ ಸಿಂಗ್ ಪಾತ್ರ ನಿರ್ವಹಿಸಿದ್ದಾರೆ. ಆದರೆ ಬಾಲಕ ಭಗತ್ ಸಿಂಗ್ ಪಾತ್ರ ಯಾರು ಮಾಡುತ್ತಾರೆ ಎಂಬುದನ್ನು ಗೌಪ್ಯವಾಗಿ ಇಡಲಾಗಿತ್ತು. ಬಾಲಕ ಭಗತ್ ಸಿಂಗ್ ಪಾತ್ರ ಕೆಲವು ನಿಮಿಷ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಬಾಲಕ ಭಗತ್ ಸಿಂಗ್ ಪೋಸ್ಟರ್​​​ಅನ್ನು ದಸರಾ ಉತ್ಸವದ ಸಮಯದಲ್ಲಿ ಬಿಡುಗಡೆ ಮಾಡಲಾಗಿದೆ.

Bhagat Singh Child Actor Poster Released In KRANTIVEERA Film
ಕ್ರಾಂತಿವೀರ ಸಿನಿಮಾದ ಬಾಲಕ ಭಗತ್ ಸಿಂಗ್ ಪೋಸ್ಟರ್ ಬಿಡುಗಡೆ

ಮಾಸ್ಟರ್ ನಿಶಾಂತ್ ಟಿ. ರಾಥೋಡ್ ಈ ‘ಕ್ರಾಂತಿವೀರ’ ಸಿನಿಮಾದಲ್ಲಿ ಬಾಲಕ ಭಗತ್ ಸಿಂಗ್ ಪಾತ್ರ ಮಾಡುತ್ತಿದ್ದಾನೆ. ಇಂದು ಮಾಸ್ಟರ್ ನಿಶಾಂತ್ ಟಿ. ರಾಥೋಡ್ ಹುಟ್ಟುಹಬ್ಬ. ಅದಕ್ಕಾಗಿ ಈ ಬಾಲಕನ ಭಗತ್ ಸಿಂಗ್ ಗೆಟಪ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮಾಸ್ಟರ್ ನಿಶಾಂತ್ ರಾಥೋಡ್ ಈ ಹಿಂದೆ ಬಾಲ ನಟನಾಗಿ ‘ಮೂಕ ಹಕ್ಕಿ’ ಹಾಗೂ ‘ಬೆಟ್ಟದ ದಾರಿ’ ಸಿನಿಮಾಗಳಲ್ಲಿ ನಟಿಸಿದ್ದಾನೆ.

ಆದತ್ ಈ ಚಿತ್ರದ ನಿರ್ದೇಶಕರು. ಕೆಜಿಎಫ್, ಬಾಗಲಕೋಟೆ, ಶಿವಮೊಗ್ಗ ಕಾರಾಗೃಹ, ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಮೊದಲ ಪ್ರತಿ ಸಿದ್ಧ ಆಗುವುದಕ್ಕೆ ಅವರು ಕೇವಲ ಎರಡು ದಿವಸದ ಕೆಲಸ ಬಾಕಿ ಇಟ್ಟುಕೊಂಡಿದ್ದಾರೆ.

ಚಂದ್ರಶೇಖರ್ ಆಜಾದ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಲಾಲಾ ಲಜಪತ್ ರಾಯ್ ಪಾತ್ರದಲ್ಲಿ ಗೀತ ಸಾಹಿತಿ, ನಿರ್ದೇಶಕ, ನಟ ಡಾ. ವಿ.ನಾಗೇಂದ್ರ ಪ್ರಸಾದ್, ಇನ್ನಿತರ ಪೋಷಕ ಪಾತ್ರಗಳಲ್ಲಿ ಜೋ ಸೈಮನ್, ಭವಾನಿ ಪ್ರಕಾಶ್ ಹಾಗೂ ಲಕ್ಷ್ಮಣ್ ಅಭಿನಯಿಸಿದ್ದಾರೆ.

ಪ್ರತಾಪ್ ಎಸ್. ಸಂಗೀತ, ಕೆ.ಎಂ.ಪ್ರಕಾಷ್ ಸಂಕಲನ, ಆರ್.ಕೆ. ನೃತ್ಯ ನಿರ್ದೇಶನ ಮಾಡಿದ್ದಾರೆ. ಚಂದ್ರಕಲ ಟಿ. ರಾಥೋಡ್, ಮಂಜುನಾಥ್ ಹೆಚ್. ನಾಯಕ್ ಹಾಗೂ ಅರ್ಜೂರಜ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.