ETV Bharat / sitara

ದೊಡ್ಡಪ್ಪ ನೀಡಿದ ಗ್ರೀನ್ ಇಂಡಿಯಾ ಚಾಲೆಂಜ್ ಪೂರ್ಣಗೊಳಿಸಿದ ಪ್ರಭಾಸ್​​​ - Prabhas Latest news

ದೊಡ್ಡಪ್ಪ ಕೃಷ್ಣಂರಾಜು ಅವರು ತಮಗೆ ನೀಡಿದ್ದ ಗ್ರೀನ್ ಇಂಡಿಯಾ ಚಾಲೆಂಜನ್ನು ಟಾಲಿವುಡ್ ನಟ ಪ್ರಭಾಸ್ ಪೂರ್ಣಗೊಳಿಸಿದ್ದಾರೆ. ರಾಜ್ಯಸಭಾ ಸದಸ್ಯ ಜೆ. ಸಂತೋಷ್ ಕುಮಾರ್ ಈ ಅಭಿಯಾನ ಆರಂಭಿಸಿದ್ದರು.

Bahubali completed Green india Challenge
ಪ್ರಭಾಸ್​​​
author img

By

Published : Jun 12, 2020, 11:20 AM IST

ಟಿಆರ್​ಎಸ್ ರಾಜ್ಯಸಭಾ ಸದಸ್ಯ ಜೆ. ಸಂತೋಷ್​​ ಕುಮಾರ್​ ಆರಂಭಿಸಿದ್ದ ಗ್ರೀನ್​ ಇಂಡಿಯಾ ಚಾಲೆಂಜ್ ಅಭಿಯಾನವನ್ನು ಈಗಾಗಲೇ ಅನೇಕ ಸೆಲಬ್ರಿಟಿಗಳು ಪೂರ್ತಿಗೊಳಿಸಿದ್ದಾರೆ. ಇದೀಗ ಟಾಲಿವುಡ್ ಸ್ಟಾರ್ ಹೀರೋ ಪ್ರಭಾಸ್​​​ ಕೂಡಾ ಈ ಚಾಲೆಂಜ್ ಸ್ವೀಕರಿಸಿದ್ದಾರೆ.

ಗ್ರೀನ್ ಇಂಡಿಯಾ ಚಾಲೆಂಜ್ ಪೂರ್ಣಗೊಳಿಸಿದ ಪ್ರಭಾಸ್​​​

ಪ್ರಭಾಸ್​​​ಗೆ ಅವರ ದೊಡ್ಡಪ್ಪ ಕೃಷ್ಣಂ ರಾಜು ಈ ಚಾಲೆಂಜ್ ನೀಡಿದ್ದು ಇಂದು ತಮ್ಮ ಗೆಸ್ಟ್​​ಹೌಸ್​​ನಲ್ಲಿ ಜೆ. ಸಂತೋಷ್ ಕುಮಾರ್ ಅವರೊಂದಿಗೆ ಸೇರಿ ಗಿಡಗಳನ್ನು ನೆಟ್ಟು ನೀರು ಹಾಕಿದ್ದಾರೆ. ನಂತರ ತಾವು ನೆಟ್ಟ ಗಿಡಗಳೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳನ್ನು ಪ್ರಭಾಸ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ವೈರಲ್ ಆಗುತ್ತಿವೆ.

Bahubali completed Green india Challenge
ಪ್ರಭಾಸ್​​​​​ ಅವರೊಂದಿಗೆ ಕೈ ಜೋಡಿಸಿದ ರಾಜ್ಯಸಭಾ ಸದಸ್ಯ ಸಂತೋಷ್​​ ಕುಮಾರ್

'ರೆಬಲ್ ಸ್ಟಾರ್ ಕೃಷ್ಣಂರಾಜು ಅವರಿಂದ ಗ್ರೀನ್​​​ ಇಂಡಿಯಾ ಚಾಲೆಂಜ್ ಸ್ವೀಕರಿಸಿ 3 ಗಿಡಗಳನ್ನು ನೆಟ್ಟಿದ್ದೇನೆ. ಈಗ ರಾಮ್​​​​ಚರಣ್ ತೇಜ, ರಾಣಾ ದಗ್ಗುಬಾಟಿ ಹಾಗೂ ಶ್ರದ್ಧಾ ಕಪೂರ್ ಅವರಿಗೆ ಈ ಚಾಲೆಂಜ್ ನೀಡುತ್ತಿದ್ದೇನೆ. 2022 ವರೆಗೆ ಈ ಗ್ರೀನ್ ಇಂಡಿಯಾ ಚಾಲೆಂಜ್ ಸರಪಳಿಯನ್ನು ಮುಂದುವರೆಸೋಣ. ನನಗೆ ಈ ಚಾಲೆಂಜ್ ನೀಡಿದ ಸಂತೋಷ್ ಕುಮಾರ್ ಅವರಿಗೆ ಧನ್ಯವಾದಗಳು' ಎಂದು ಪ್ರಭಾಸ್ ಬರೆದುಕೊಂಡಿದ್ದಾರೆ.

ಜೆ. ಸಂತೋಷ್​​ ಕುಮಾರ್ ಅವರಿಗೆ ಧನ್ಯವಾದ ಹೇಳಿದ ಪ್ರಭಾಸ್​​​

ಪ್ರಭಾಸ್ ಕರಿಯರ್ ವಿಚಾರಕ್ಕೆ ಬರುವುದಾದರೆ ಕೆ.ಕೆ. ರಾಧಾಕೃಷ್ಣ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಪ್ರಭಾಸ್​​​​ಗೆ ಜೊತೆಯಾಗಲಿದ್ದಾರಂತೆ. ಇದು ಪ್ರಭಾಸ್ ಅಭಿನಯದ 20ನೇ ಸಿನಿಮಾ. ಇದರೊಂದಿಗೆ ನಾಗ್ ಅಶ್ವಿನ್ ಅವರ ಮತ್ತೊಂದು ಚಿತ್ರದಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ದು ಇದು ಪ್ರಭಾಸ್ ಅವರ 21ನೇ ಚಿತ್ರವಾಗಲಿದೆ.

ತಮ್ಮ ಗೆಸ್ಟ್​​ಹೌಸ್​​ನಲ್ಲಿ ಗಿಡ ನೆಟ್ಟ ಡಾರ್ಲಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.