ETV Bharat / sitara

ಆಯುಷ್ಮಾನ್ ಖುರಾನಾ​ ನಟನೆಯ 'ಅನೇಕ್' ಚಿತ್ರ ಬಿಡುಗಡೆಗೆ ಡೇಟ್​ ಫಿಕ್ಸ್

author img

By

Published : Feb 22, 2021, 9:47 PM IST

Updated : Feb 22, 2021, 10:57 PM IST

ಈ ತಿಂಗಳ ಆರಂಭದಲ್ಲಿ ಅನೇಕ್ ಚಿತ್ರ ಸೆಟ್ಟೇರಿದ್ದು, ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರವು ನಿರ್ದೇಶಕ ಸಿನ್ಹಾ ಅವರ ಅತ್ಯಂತ ದುಬಾರಿ ಮತ್ತು ದೊಡ್ಡ ಪ್ರಮಾಣದ ಚಿತ್ರವಾಗಲಿದೆ.

Ayushmann Khurrana's Anek gets release date
ಆಯುಷ್ಮಾನ್ ಖುರಾನ ನಟನೆಯ 'ಅನೇಕ್' ಚಿತ್ರ ಬಿಡಗಡೆಗೆ ಡೇಟ್​ ಫಿಕ್ಸ್

ಹೈದರಾಬಾದ್ : ಅನೇಕ್ ಚಿತ್ರದ ಮೂಲಕ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ​ ಹಾಗೂ ನಿರ್ಮಾಪಕ ಅನುಭವ್ ಸಿನ್ಹಾ ಮತ್ತೆ ಜೊತೆಯಾಗಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಅನೇಕ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಆರ್ಟಿಕಲ್-15 ಬಳಿಕ ಇಬ್ಬರು ಪ್ರಮುಖರ ಕಾಂಬಿನೇಷನ್​ನಲ್ಲಿ ಮೂಡಿ ಬರಲಿರುವ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸೆಪ್ಟೆಂಬರ್​ 17,2021ಕ್ಕೆ ಚಿತ್ರ ಬಿಡುಗಡೆ ಮಾಡುವುದಾಗಿ ಟಿ-ಸಿರೀಸ್​​ ತಮ್ಮ ಟ್ವಿಟ್ಟರ್​ ಹ್ಯಾಂಡಲ್​ನಲ್ಲಿ ಬರೆದುಕೊಂಡಿದೆ.

ಆಯುಷ್ಮಾನ್ ಖುರಾನಾ​ ಅವರ ಪಾತ್ರ ಮತ್ತು ಅಂತಾರಾಷ್ಟ್ರೀಯ ಆ್ಯಕ್ಷನ್​ ಡೈರೆಕ್ಟರ್​ ಸ್ಟೀಫನ್ ರಿಕ್ಟರ್​ ಕೆಲಸ ಮಾಡುವುದು ಬಿಟ್ಟರೆ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಈ ತಿಂಗಳ ಆರಂಭದಲ್ಲಿ ಅನೇಕ್ ಚಿತ್ರ ಸೆಟ್ಟೇರಿದ್ದು, ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರವು ನಿರ್ದೇಶಕ ಸಿನ್ಹಾ ಅವರ ಅತ್ಯಂತ ದುಬಾರಿ ಮತ್ತು ದೊಡ್ಡ ಪ್ರಮಾಣದ ಚಿತ್ರವಾಗಲಿದೆ. ನಿರ್ಮಾಪಕ ಭೂಷಣ್ ಕುಮಾರ್ ಅವರೊಂದಿಗೆ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Last Updated : Feb 22, 2021, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.