'ಶಿವಲಿಂಗ' ಸಿನಿಮಾ ನಂತರ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಪಿ. ವಾಸು ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಬಹುನಿರೀಕ್ಷಿತ ಚಿತ್ರ 'ಆಯುಷ್ಮಾನ್ಭವ'. ಕೇವಲ ಟ್ರೇಲರ್ನಿಂದಲೇ ಒಂದಷ್ಟು ಕುತೂಹಲ ಹುಟ್ಟುಹಾಕಿದ್ದ ಸಿನಿಮಾ ಇಂದು ರಾಜ್ಯಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಶಿವಣ್ಣನ ಚಿತ್ರವನ್ನು ಅಭಿಮಾನಿಗಳು ಕೂಡಾ ಭರ್ಜರಿಯಿಂದ ಬರಮಾಡಿಕೊಂಡಿದ್ದಾರೆ. ನಿರ್ದೇಶಕ ಪಿ. ವಾಸು ಮತ್ತೆ ಸೈಕಾಲಜಿಕಲ್ ಸಿನಿಮಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಜಿ. ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾವನ್ನು ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇನ್ನು ಸೆಂಚುರಿಸ್ಟಾರ್ ಶಿವರಾಜ್ಕುಮಾರ್ ಆ್ಯಕ್ಟಿಂಗ್ ಬಗ್ಗೆ ಹೇಳುವ ಅಗತ್ಯವೇ ಬೇಡ. ತಮ್ಮ ಪಾತ್ರಕ್ಕಾಗಿ ಶಿವಣ್ಣ ಪರಕಾಯ ಪ್ರವೇಶ ಮಾಡಿದ್ದಾರೆ. ಇನ್ನು ಮಾನಸಿಕ ಅಸ್ವಸ್ಥೆ ಪಾತ್ರದಲ್ಲಿ ರಚಿತಾ ರಾಮ್ ಅಭಿನಯ ಕೂಡಾ ಚೆನ್ನಾಗಿದೆ. ಎವರ್ಗ್ರೀನ್ ಹೀರೋ ಅನಂತ್ನಾಗ್ ಎಂದೆಂದಿಗೂ ಎವರ್ಗ್ರೀನ್. ಅವರ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.