ಇಂದು ರಕ್ಷಾ ಬಂಧನದ ನಿಮಿತ್ತ ರಾಕಿಂಗ್ ಸ್ಟಾರ್ ಯಶ್ಗೆ ಮುದ್ದಿನ ತಂಗಿ ನಂದಿನಿ ರಾಖಿ ಕಟ್ಟಿ ಸಂಭ್ರಮಿಸಿದರು.
![ತಮ್ಮನಿಗೆ ರಾಖಿ ಕಟ್ಟಿದ ಐರಾ](https://etvbharatimages.akamaized.net/etvbharat/prod-images/kn-bng-03-yash-magala-rocky-habba-7204735_03082020212357_0308f_1596470037_3.jpg)
ಸಂಜೆ ಯಶ್ ಹಾಗೂ ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ, ಪುಟ್ಟ ತಮ್ಮನಿಗೆ ರಾಖಿ ಕಟ್ಟುವ ಮೂಲಕ ಮೊದಲ ವರ್ಷದ ರಾಖಿ ಹಬ್ಬವನ್ನ ಆಚರಣೆ ಮಾಡಿದ್ದಾರೆ.
![ಐರಾ ಕಟ್ಟಿದ ರಾಖಿ](https://etvbharatimages.akamaized.net/etvbharat/prod-images/kn-bng-03-yash-magala-rocky-habba-7204735_03082020212357_0308f_1596470037_98.jpg)
ಹತ್ತು ತಿಂಗಳ ತಮ್ಮನಿಗೆ ಐರಾ ಸಾಂಪ್ರದಾಯಿಕ ಬಟ್ಟೆ ತೊಟ್ಟು, ರಾಖಿ ಕಟ್ಟಿ, ಆರತಿ ಬೆಳಗಿದರು.
![ಮುದ್ದಿನ ತಮ್ಮನೊಂದಿಗೆ ಐರಾ](https://etvbharatimages.akamaized.net/etvbharat/prod-images/kn-bng-03-yash-magala-rocky-habba-7204735_03082020212357_0308f_1596470037_624.jpg)
ಮಗಳು ಐರಾಗೆ ತಾಯಿ ರಾಧಿಕಾ ಪಂಡಿತ್ ಸಹಾಯ ಮಾಡಿದ್ದಾರೆ. ಸದ್ಯ ಯಶ್ ಮತ್ತು ರಾಧಿಕಾ ಪಂಡಿತ್ ಮಗಳು ಐರಾ ರಾಖಿ ಹಬ್ಬದ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
![ಮಗಳು ಐರಾಗೆ ತಾಯಿ ರಾಧಿಕಾ ಪಂಡಿತ್ ಸಹಾಯ](https://etvbharatimages.akamaized.net/etvbharat/prod-images/kn-bng-03-yash-magala-rocky-habba-7204735_03082020212357_0308f_1596470037_52.jpg)