ವಿಶ್ವದಾದ್ಯಂತ ಕೊರೊನಾ ಎಂಬ ಮಹಾಮಾರಿ ರಣಕೇಕೆ ಹಾಕುತ್ತಿದೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ಸರ್ಕಾರ ವಿನೂತನವಾಗಿ, ಕೊರೊನಾ ವಿರುದ್ದ ಹೋರಾಟ ಮಾಡಲು ಮಾಸ್ಕ್ ಡೇ ಅಂತಾ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಹೀಗಾಗಿ ಇಂದು ರಾಜ್ಯಾದ್ಯಂತ ಮಾಸ್ಕ್ ಡೇ ಆಚರಿಸಲಾಗಿದೆ. ಈ ಮಾಸ್ಕ್ ಡೇಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಈ ಅಭಿಯಾನಕ್ಕೆ ಈಗಾಗಲೇ ಪುನೀತ್ ರಾಜ್‍ಕುಮಾರ್, ರಾಗಿಣಿ ಕೈ ಜೋಡಿಸಿದ್ದಾರೆ.
ಈಗ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿಯಾಗಿರೋ ಯಶ್ ಹಾಗು ರಾಧಿಕಾ ಪಂಡಿತ್ ಮತ್ತು ಮಗಳು ಐರಾ ಮುಖಕ್ಕೆ ಮಾಸ್ಕ್ ಧರಿಸಿ ತಮ್ಮ ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.
- " class="align-text-top noRightClick twitterSection" data="
">
ಎಲ್ಲಿಗೇ ಹೋದ್ರು ಮಾಸ್ಕ್ ಧರಿಸಿ, ಸಮಾಜಿಕ ಅಂತರ ಕಾಯ್ದುಕೊಳ್ಳಿ, ಸ್ಟೇ ಹೋಂ ಸ್ಟೇ ಸೇಫ್. ಖುಷಿಯಾಗಿರಿ ಅಂತಾ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.