ಸ್ಯಾಂಡಲ್ವುಡ್ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರ 'ಅವನೇ ಶ್ರೀಮನ್ನಾರಾಯಣ' ಇದೇ ತಿಂಗಳು ವಿಶ್ವಾದ್ಯಂತ ರಿಲೀಸ್‌ಗೆ ರೆಡಿಯಾಗಿದೆ. ಅಲ್ಲದೆ ಈಗಾಗಲೇ ಚಿತ್ರದ ಟೀಸರ್ ಹಾಗೂ ಟ್ರೇಲರ್ ಕೂಡಾ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ನಾರಾಯಣ ಭಾರೀ ಹವಾ ಸೃಷ್ಟಿಸಿದ್ದಾನೆ.
-
ಹುಡುಕಿ ಹುಡುಕಿ, search for those numbers in the trailer and form a code to win cash prize :-) -- https://t.co/YUjX6zBc9B @Pushkara_M @shanvisrivastav @SachinBRavi @PushkarFilms @The_BigLittle pic.twitter.com/1CLxfxPdSM
— Rakshit Shetty (@rakshitshetty) December 10, 2019 " class="align-text-top noRightClick twitterSection" data="
">ಹುಡುಕಿ ಹುಡುಕಿ, search for those numbers in the trailer and form a code to win cash prize :-) -- https://t.co/YUjX6zBc9B @Pushkara_M @shanvisrivastav @SachinBRavi @PushkarFilms @The_BigLittle pic.twitter.com/1CLxfxPdSM
— Rakshit Shetty (@rakshitshetty) December 10, 2019ಹುಡುಕಿ ಹುಡುಕಿ, search for those numbers in the trailer and form a code to win cash prize :-) -- https://t.co/YUjX6zBc9B @Pushkara_M @shanvisrivastav @SachinBRavi @PushkarFilms @The_BigLittle pic.twitter.com/1CLxfxPdSM
— Rakshit Shetty (@rakshitshetty) December 10, 2019
'ಅವನೇ ಶ್ರೀಮನ್ನಾರಾಯಣ' ಚಿತ್ರದ ಟೀಸರ್ ಹಾಗೂ ಟ್ರೇಲರ್ಗೆ ಸಿಕ್ಕಿರುವ ಅದ್ಭುತ ರೆಸ್ಪಾನ್ಸ್ಗೆ ಫುಲ್ಖುಷ್ ಆಗಿರುವ ಚಿತ್ರತಂಡ, ಈಗ ಸಿನಿಪ್ರಿಯರಿಗಾಗಿ ಬಂಪರ್ ಆಫರ್ ಘೋಷಿಸಿದೆ. 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟೀಸರ್ ಹಾಗೂ ಟ್ರೇಲರ್ನ ವಿಡಿಯೋದಲ್ಲಿ ಕೆಲವು ನಂಬರ್ಗಳು ಇವೆ. ನಂಬರ್ಗಳನ್ನು ಹುಡುಕಿ ಆ ನಂಬರ್ಗಳನ್ನು ನನಗೆ ಟ್ವಿಟರ್ನಲ್ಲಿ ಟ್ಯಾಗ್ ಮಾಡಿ. ಯಾರು ಬೇಗ ಆ ನಂಬರ್ಗಳನ್ನು ಹುಡುಕುತ್ತಾರೋ ಆ ಅದೃಷ್ಟ ಶಾಲಿಗೆ ನಗದು ಬಹುಮಾನ ಕೊಡಲಾಗುವುದು ಎಂದು ವಿಡಿಯೋ ಮೂಲಕ ಬಂಪರ್ ಆಫರನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನೀಡಿದ್ದಾರೆ.
ಈ ಸಿನಿಮಾ ಇದೇ ತಿಂಗಳ 27 ರಂದು ವಿಶ್ವಾದ್ಯಂತ 5 ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಚಿತ್ರಕ್ಕೆ ನವ ನಿರ್ದೇಶಕ ಸಚಿನ್ ರವಿ ಆ್ಯಕ್ಷನ್ ಕಟ್ ಹೇಳಿದ್ದು, ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನ್ ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.