ETV Bharat / sitara

ವರ್ಷದ ಕೊನೆಯ ಶುಕ್ರವಾರ 'ಅವನೇ ಶ್ರೀ ಮನ್ನಾರಾಯಣ'ನ ದರ್ಶನ

author img

By

Published : Oct 22, 2019, 9:12 AM IST

ಚಿತ್ರಪ್ರೇಮಿಗಳ ನಿರೀಕ್ಷೆಯ 'ಅವನೇ ಶ್ರೀಮನ್ನಾರಾಯಣ' ಚಿತ್ರ ಡಿಸೆಂಬರ್ 27ಕ್ಕೆ ತೆರೆಗೆ ಬರಲಿದೆ.

'ಅವನೇ ಶ್ರೀ ಮನ್ನಾರಾಯಣ' ಪೋಸ್ಟರ್​​

ಸಿಂಪಲ್ ಸ್ಟಾರ್ ಜನಪ್ರಿಯತೆಯ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟ್ರೇಲರ್ ಹೊಸ ಟ್ರೆಂಡ್ ಕ್ರಿಯೆಟ್ ಮಾಡಿದ್ದು, ಸಿನಿಮಾ ಕಣ್ತುಂಬಿಕೊಳ್ಳಲು ಕಾಯ್ತಿದ್ದ 'ಚಾರ್ಲಿ' ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಸಿನಿ ಪ್ರೇಮಿಗಳು ಕಾತರದ ಕಣ್ಣುಗಳಿಂದ ಕಾಯುತ್ತಿರುವ ಈ ಸಿನಿಮಾ ಡಿಸೆಂಬರ್​​ 27ಕ್ಕೆ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳಲಿದೆ.

ಸಿನಿಮಾದ ಚಿತ್ರೀಕರಣ ಆರಂಭಕ್ಕೂ ಮುನ್ನವೇ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ನಿಗದಿ ಮಾಡಿತ್ತು.

Avane srimannaraya Release Date Announce
'ಅವನೇ ಶ್ರೀ ಮನ್ನಾರಾಯಣ' ಫಿಲಂ ಪೋಸ್ಟರ್​​

2016 ಡಿಸೆಂಬರ್ 30ಕ್ಕೆ ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಸಿನಿಮಾ ರಿಲೀಸ್ ಆಗಿತ್ತು. ಈಗ ಡಿಸೆಂಬರ್ ತಿಂಗಳಲ್ಲೇ ಅವರದ್ದೇ ಮುಖ್ಯಭೂಮಿಕೆಯ ಮತ್ತೊಂದು ಸಿನಿಮಾ ತೆರೆಗೆ ಬರುತ್ತಿದೆ.

ಅಂದಹಾಗೆ, ಈ ಚಿತ್ರದಲ್ಲಿ ರಕ್ಷಿತ್ ನಟನೆಯ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಪುಷ್ಕರ ಮಲ್ಲಿಕಾರ್ಜುನಯ್ಯ ಮತ್ತು 'ರಂಗಿತರಂಗ' ಖ್ಯಾತಿಯ ಪ್ರಕಾಶ್ ಜೊತೆ ಸೇರಿ ರಕ್ಷಿತ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಸಚಿನ್ ರವಿ ನಿರ್ದೇಶನ ಮಾಡಿದ್ದಾರೆ.

'ಅವನೇ ಶ್ರೀಮನ್ನಾರಯಣ'ನಿಗೆ 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ನಾಯಕಿಯಾಗಿದ್ದು, 'ಪೈಲ್ವಾನ್' ಚಿತ್ರದ ನಂತರ ಸ್ಯಾಂಡಲ್‌ವುಡ್‌ನ ಮತ್ತೊಂದು ಪಾನ್ ಇಂಡಿಯಾ ಸಿನಿಮಾ ರಿಲೀಸ್‌ ಆಗಲು ಅಭಿಮಾನಿಗಳು ಇನ್ನು ಕೆಲವು ದಿನಗಳಷ್ಟೇ ಕಾಯಬೇಕು.

  • ಅವನೇ ಶ್ರೀಮನ್ನಾರಾಯಣ 🕵️‍♂️ 27th December Guys 🤘🏼 #LastFridayOfTheYear

    — Rakshit Shetty (@rakshitshetty) October 21, 2019 " class="align-text-top noRightClick twitterSection" data=" ">

Intro:ಅವನೇ ಶ್ರೀ ಮನ್ನಾರಾಯಣನ ದರ್ಶನಕ್ಕೆ ಮುಹೂರ್ತ ಫಿಕ್ಸ್

ಸಿಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇಅ ಶ್ರೀಮನ್ನಾರಾಯಣ' ಟ್ರೈಲರ್ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದು, ಸಿನಿಮಾ ಕಣ್ತುಂಬಿ ಕೊಳ್ಳಲು ಕಾಯ್ತಿದ್ದ " ಚಾರ್ಲಿ " ಅಭಿಮಾನಿಗಳಿಗೆ" ರಕ್ಷೀತ್ ಶೆಟ್ಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.ತುಂಭಾ ಕಾತರದಿಂದ ಕಾಯ್ತಿದ್ದ ಅವನೇ ಶ್ರೀ ಮನ್ನಾರಾಯಣನ ಇದೇ ಡಿಸೆಂಬರ್ ೨೭ ಗ್ರಾಂಡ್ ರಿಲೀಸ್ ಆಗಲಿದೆ ಎಂದು ಹೇಳಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.ಸಿನಿಮಾದ ಚಿತ್ರೀಕರಣ ಆರಂಭಕ್ಕೂ ಮುನ್ನಾ ಸಿನಿಮಾ ಬಿಡುಗಡೆಯ ದಿನಾಂಕ ನಿಗದಿ‌ಮಾಡಿದ್ದ 'ಅವನೇ ಶ್ರೀಮನ್ನಾರಾಯಣ ಚಿತ್ರತಂಡ. ಹೇಳಿದಂತೆ ಡಿಸೆಂಬರ್ .
2 7ಕ್ಕೆ ತೆರೆಗೆ ಬರಲಿದೆ. Body:2016 ಡಿಸೆಂಬರ್ 30ಕ್ಕೆ ರಕ್ಷಿತ್ ಶೆ್ಟ್ಟ್ಟಿಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಸಿನಿಮಾ ಕೂಡ ರಿಲೀಸ್ ಆಗಿತ್ತು. ಈಗ ಡಿಸೆಂಬರ್ ತಿಂಗಳಿನಲ್ಲಿಯೇ ರಕ್ಷಿತ್ ಮತ್ತೊಂದು ಸಿನಿಮಾ ಬಿಡುಗಡೆಯಾಗಲಿದೆ. ಅಂದಹಾಗೆ, ಈ ಚಿತ್ರದಲ್ಲಿ ರಕ್ಷಿತ್ ನಟನೆ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಪುಷ್ಕರ ಮಲ್ಲಿಕಾರ್ಜುನಯ್ಯ ಮತ್ತು 'ರಂಗಿತರಂಗ' ಖ್ಯಾತಿಯ ಪ್ರಕಾಶ್ ಜೊತೆ ಸೇರಿ ರಕ್ಷಿತ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ರೆ, ಕಿರಿಕ್ ಪಾರ್ಟಿ ಚಿ್್ರತ್ರದಲ್ಲಿ ಸಹಾಯಕ ನಿರ್ದೇಶಕ ನಾಗಿ ವರ್ಕ್ ಮಾಡಿದ್ದ ಸಚಿನ್ ರವಿ ಚಿತ್ರಕ್ಕೆ ಆಕ್ಷನ್ ಕಟ್
ಹೇಳಿದ್ದು, ,ಮಾಸ್ಟರ್ ಪೀಸ್ ಬೆಡಗಿಶಾನ್ವಿನಾಯಕಿಯಾಗಿ
ನಟಿಸಿದ್ದು, ಫೈಲ್ವಾನ್ ಚಿತ್ರದ ನಂತರ ಮತ್ತೋಂದು ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ್ ವೇದಿಕೆ ಸಿದ್ದವಾಗಿದೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.