ETV Bharat / sitara

ಅಭಿಮಾನಿಗಳ ನೆಚ್ಚಿನ ಆಟೋರಾಜನ ಜನ್ಮದಿನ.. ವಿಶಿಷ್ಟವಾಗಿ ಆಚರಿಸಿದ ರಿಕ್ಷಾವಾಲಾಗಳು

author img

By

Published : Nov 9, 2020, 4:49 PM IST

Updated : Nov 9, 2020, 7:45 PM IST

ಕನ್ನಡ ಚಿತ್ರರಂಗದ ಕರಾಟೆ ಕಿಂಗ್, ಆಟೋ ಚಾಲಕರ ನೆಚ್ಚಿನ್ನ ಶಂಕ್ರಣ್ಣ ನಟ ಶಂಕರ್​ ನಾಗ್ ಅವರ 66 ನೇ ಜನ್ಮ ದಿನವನ್ನು ಬೆಂಗಳೂರಿನಲ್ಲಿ ಆಟೋ ಚಾಲಕರು ವಿಶೇಷವಾಗಿ ಆಚರಿಸಿದರು..

Auto Drivers Celebrated Birthday of Shankar Nag
ಆಟೋಚಾಲಕರಿಂದ ಶಂಕರ್ ನಾಗ್ ಜನ್ಮ ದಿನಾಚರಣೆ

ಕನ್ನಡ ಚಿತ್ರರಂಗದಲ್ಲಿ ಕಡಿಮೆ ಅವಧಿಯಲ್ಲಿ ತನ್ನದೇ ಆದ ಚಾಪು ಮೂಡಿಸಿ, ಕಣ್ಮರೆಯಾದ ಅಭಿಮಾನಿಗಳ ನೆಚ್ಚಿನ ಆಟೋ ರಾಜ ಶಂಕರ್ ನಾಗ್​ ಅವರ ಹುಟ್ಟುಹಬ್ಬ ಇಂದು.

ಕನ್ನಡ ಚಿತ್ರ ರಂಗವನ್ನು ಹಾಲಿವುಡ್ ಸಿನಿಮಾ ಮಟ್ಟಿಗೆ ಬೆಳೆಸಬೇಕು ಎಂದು ಶಂಕರ್ ನಾಗ್ ಕನಸು ಕಂಡಿದ್ದರು. ಆದರೆ, ಅದು ನನಸಾಗುವ ಮೊದಲೇ ಕರಾಟೆ ಕಿಂಗ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಶಂಕರ್ ನಾಗ್ ನಮ್ಮೊಂದಿಗೆ ಇದ್ದಿದ್ದರೆ, ಇಂದು 66ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು.

ಶಂಕರಣ್ಣ ಅಭಿನಯದ ಸಿನಿಮಾಗಳು ಹಾಗೂ ನಿರ್ದೇಶನ ಮಾಡಿದ ಚಿತ್ರಗಳು ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ. ತನ್ನ ಚಿತ್ರದ ಮೂಲಕ ಆಟೋ ಚಾಲಕರಿಗೆ ಒಂದು ಗೌರವ ತಂದು ಕೊಟ್ಟ ಏಕೈಕ ನಟ ಶಂಕರ್ ನಾಗ್. ಹೀಗಾಗಿ, ಅವರ ಹುಟ್ಟು, ಹಾಗೂ ನಿಧನದ ದಿನವನ್ನು ಅಭಿಮಾನಿಗಳು ಇಂದಿಗೂ ಸ್ಮರಿಸುತ್ತಾರೆ.

ಆಟೋ ಚಾಲಕರಿಂದ ಶಂಕರ್​ ನಾಗ್ ಜನ್ಮ ದಿನಾಚರಣೆ

ಶಂಕರ್​ ನಾಗ್​ ಜನ್ಮ ದಿನ ಹಾಗೂ ಕನ್ನಡ ರಾಜ್ಯೋತ್ಸವ ಹಿನ್ನೆಲೆ, ನಾಗಸಂದ್ರ ಆಟೋ ಚಾಲಕರ ಸಂಘ ಆಟೋಗಳಿಗೆ ಸಿಂಗಾರ ಮಾಡಿ ಕನ್ನಡ ಬಾವುಟ ಹಾರಿಸಿದರು. ಆಟೋ ಚಾಲಕರಿಗೆ ಗೌರವ ತಂದುಕೊಟ್ಟವರು ನಮ್ಮ ಶಂಕ್ರಣ್ಣ ಎಂದು ಅಭಿಮಾನಿಗಳು ನೆನಪಿಸಿಕೊಂಡರು.

Last Updated : Nov 9, 2020, 7:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.