ನಟ ಧ್ರುವ ಸರ್ಜಾ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಈಗಾಗಲೇ 'ಅದ್ದೂರಿ', 'ಭರ್ಜರಿ', 'ಬಹದ್ದೂರ್', ‘ಪೊಗರು’ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿದ್ದಾರೆ. ಇದೀಗ ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಆಗಸ್ಟ್ 15 ರಂದು ಮುಹೂರ್ತ ಸಮಾರಂಭ ನೆರವೇರಲಿದೆ.
ಈ ಹಿಂದೆ ಧ್ರುವ ಅಭಿನಯದ 'ಬಹದ್ದೂರ್' ಚಿತ್ರಕ್ಕೆ ನಟ ರವಿಚಂದ್ರನ್ ಕ್ಲಾಪ್ ಮಾಡಿದ್ದರು. ಈಗ ಕೂಡ ಹೊಸ ಚಿತ್ರದ ಮುಹೂರ್ತ ಸಮಾರಂಭಕ್ಕೆ ರವಿಚಂದ್ರನ್ ಆಗಮಿಸಿ, ಶುಭ ಕೋರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಅಂದುಕೊಂಡಂತೆ ಆಗಿದ್ರೆ ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿದಿರಬೇಕಿತ್ತು. ಆದರೆ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ತಡವಾಗಿ ಶೂಟಿಂಗ್ ಪ್ರಾರಂಭವಾಗುತ್ತಿದೆ. ಆಗಸ್ಟ್ 15 ರಂದು ಮುಹೂರ್ತ ಸಮಾರಂಭ ನಡೆಯಲಿದ್ದು, ಅಂದೇ ಚಿತ್ರದ ಹೆಸರು ಮತ್ತು ಫಸ್ಟ್ ಲುಕ್ ಬಿಡುಗಡೆಯಾಗುತ್ತದಂತೆ.
ಈ ಹೊಸ ಚಿತ್ರವನ್ನು ಉದಯ್ ಮೆಹ್ತಾ ನಿರ್ಮಿಸುತ್ತಿದ್ದು, ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಕಥೆ-ಚಿತ್ರಕಥೆ ಸಹ ಅವರದ್ದೇ. ಮಿಕ್ಕಂತೆ ಚಿತ್ರದ ನಾಯಕಿ, ಉಳಿದ ಕಲಾವಿದರು, ಹಾಗೂ ಸಿನಿಮಾದ ವಿಶೇಷತೆಗಳೇನು ಎಂಬ ವಿಷಯವನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ. ಎಲ್ಲವನ್ನು ಒಂದೇ ಬಾರಿಗೆ ಆಗಸ್ಟ್ 15 ರಂದು ಘೋಷಿಸಲಾಗುತ್ತದಂತೆ.