ಕೆಜಿಎಫ್ ಸಿನಿಮಾ ಮೂಲಕ ದೇಶದ ಗಮನ ಸೆಳೆದಿರುವ ಹೊಂಬಾಳೆ ಫಿಲ್ಮ್ ಈಗಾಗಲೇ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಾಗಿ ಘೋಷಿಸಿದೆ. ಉಗ್ರಂ, ಕೆಜಿಎಫ್ ಸಿನಿಮಾ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಲಾರ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಹೀರೋ ಆಗಿ ನಟನೆ ಮಾಡುತ್ತಿರೋದು ಎಲ್ಲಾರಿಗೂ ಗೊತ್ತಿರುವ ವಿಚಾರ.
ಸದ್ಯ ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾಕ್ಕಾಗಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡ್ತಾ ಇದ್ದಾರೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ ಸಂಸ್ಥೆ ಹೊಸ ಕಲಾವಿದರ ಹುಡುಕಾಟದಲ್ಲಿದೆ. ಡಿಸೆಂಬರ್ 15ರಂದು ಹೊಸ ಕಲಾವಿದರ ಆಡಿಷನ್ ನಡೆಯಲಿದೆ.
ಇದನ್ನೂ ಓದಿ : ಕೊನೆಯ ಹಂತದ ಚಿತ್ರೀಕರಣದಲ್ಲಿ ಫ್ಯಾಂಟಮ್
ಮೊದಲು ಹೈದರಾಬಾದ್ನಲ್ಲಿ ಆಡಿಷನ್ ಮಾಡಲು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ ಸಂಸ್ಥೆ ತೀರ್ಮಾನಿಸಿದೆ. ಬಳಿಕ ಬೆಂಗಳೂರು ಹಾಗೂ ಚನ್ನೈನಲ್ಲಿ ಆಡಿಷನ್ ಮಾಡುವ ಪ್ಲಾನ್ ಮಾಡಿದೆ. ಈ ಹಿಂದೆ ಕೆಜಿಎಫ್ ಸಿನಿಮಾದ ಶೈಲಿಯಲ್ಲಿಯೇ ಸಲಾರ್ ಸಿನಿಮಾಕ್ಕಾಗಿ ಹೊಸ ಪ್ರತಿಭೆಗಳನ್ನು ಹುಡುಕಲಾಗುತ್ತಿದೆ.
ಚಿತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಹೊಸ ಪ್ರತಿಭೆಗಳಿಗೆ ಇದು ಅನುಕೂಲವಾಗಲಿದೆ. ಕೆಜಿಎಫ್ ಮೂಲಕ ಹೊಸ ಕ್ರೇಜ್ ಸೃಷ್ಟಿಸಿರುವ ಪ್ರಶಾಂತ್ ನೀಲ್ ಇದೀಗ ಬಾಹುಬಲಿ ಮೂಲಕ ಹೆಸರಾದ ಪ್ರಭಾಸ್ ಜತೆ ಸೇರಿರುವುದು ಸಿನಿ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸಿದೆ.