ETV Bharat / sitara

ಪುನೀತ್ ರಾಜ್​ಕುಮಾರ್​ ಕನಸೊಂದನ್ನು ನನಸು ಮಾಡುವ ಹೊಣೆ ಹೊತ್ತ ಪತ್ನಿ ಅಶ್ವಿನಿ..

'ಗಂಧದಗುಡಿ' ಹೆಸರಿನ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದ ಪುನೀತ್​ ರಾಜ್​ಕುಮಾರ್​ ನವೆಂಬರ್​ 1 ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ ಅದರ ಟೀಸರ್​ ಬಿಡುಗಡೆ ಮಾಡಲು ತಯಾರಿ ನಡೆಸಿದ್ದರು. ಆದರೆ ಅವರು ಅ.29ರಂದು ಇಹಲೋಕ ತ್ಯಜಿಸಿದರು. ಅಪ್ಪು ಕನಸನ್ನು ನನಸಾಗಿಸಲು ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಮುಂದಾಗಿದ್ದಾರೆ.

Ashwini Puneeth
ಅಶ್ವಿನಿ - ಪುನೀತ್
author img

By

Published : Nov 25, 2021, 1:48 PM IST

ಕನ್ನಡ ಚಿತ್ರರಂಗದ ಯೂತ್ ಐಕಾನ್ ಆಗಿದ್ದವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ನಗು ಮುಖದ ರಾಜಕುಮಾರ ಬದುಕಿದ್ದಾಗ ಹಲವಾರು ಕನಸುಗಳನ್ನು ಕಂಡಿದ್ದರು. ಆದರೆ ವಿಧಿಯಾಟದಿಂದ ಅಪ್ಪು ಇಹಲೋಕ ತ್ಯಜಿಸಿದರು. ಈಗ ಅವರ ಕನಸುಗಳನ್ನ ನನಸು ಮಾಡುವ ಜವಾಬ್ದಾರಿಯನ್ನ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ವಹಿಸಿಕೊಂಡಿದ್ದಾರೆ.

ಪಿಆರ್​ಕೆ ಪ್ರೊಡಕ್ಷನ್​ ಹೌಸ್​, ಗಾಂಧಿನಗರದಲ್ಲಿರುವ ವಜ್ರೇಶ್ವರಿ ಸಂಸ್ಥೆಯ ಕೆಲಸಗಳನ್ನ ಅಶ್ವಿನಿ ಅವರೇ ಮುನ್ನೆಡಸಬೇಕಿದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಇದರ ಜೊತೆಯಲ್ಲಿ, ಪುನೀತ್ ಬದುಕಿದ್ದಾಗ ಕರುನಾಡ ಕುರಿತು ಡಾಕ್ಯುಮೆಂಟರಿ ಮಾಡಿರುವ ಬಗ್ಗೆ ಸುಳಿವು ನೀಡಿದ್ದರು. ‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಅಕ್ಟೋಬರ್​ 27ರಂದು ಪುನೀತ್​ ಟ್ವಟರ್​​ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ, ನವೆಂಬರ್​ 1ಕ್ಕಾಗಿ ಕಾಯಿರಿ ಎಂದು ಹೇಳಿದ್ದರು.

  • ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು.
    ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು.
    ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು.
    ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.
    ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ. @amoghavarsha @AJANEESHB @PRK_Productions @PRKAudio #mudskipper pic.twitter.com/ncE6CxOQrg

    — Puneeth Rajkumar (@PuneethRajkumar) October 27, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಚಾಮರಾಜನಗರ: ನಟ ವಿಜಯ್​ ರಾಘವೇಂದ್ರರಿಂದ ರಕ್ತದಾನ.. ನೇತ್ರದಾನ ಮಾಡಲು ಕರೆ

2019ರಲ್ಲಿ ತೆರೆಕಂಡ 'ವೈಲ್ಡ್ ಕರ್ನಾಟಕ' ಡಾಕ್ಯುಮೆಂಟರಿ ನಿರ್ದೇಶಕ ಅಮೋಘವರ್ಷ ಅವರ ಜೊತೆ ಸೇರಿ ಕರುನಾಡ ಬಗ್ಗೆ 'ಗಂಧದಗುಡಿ' ಹೆಸರಿನ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. ರಾಜ್ಯದ ನಾನಾ ಕಡೆಗಳಲ್ಲಿ ಭೇಟಿ ನೀಡಿ ಇದನ್ನು ಶೂಟ್​ ಮಾಡಲಾಗಿತ್ತು. ಪುನೀತ್​ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ನವೆಂಬರ್​ 1 ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ ಅದೇ ದಿನ ಈ ಡಾಕ್ಯುಮೆಂಟರಿಯ ಟೀಸರ್​ ಬಿಡುಗಡೆ ಮಾಡಲು ಅಪ್ಪು ನಿರ್ಧರಿಸಿದ್ದರು. ಆದರೆ, ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು.

ಈಗ ಈ ಬಗ್ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಟ್ವೀಟ್​ ಮಾಡಿದ್ದು, "ಅಪ್ಪು ಅವರ ಕನಸೊಂದು 01.11.2021 ರಂದು ಬೆಳಕು ಕಾಣಬೇಕಿತ್ತು. ಆದರೆ ಆ ಕನಸಿಗಿದು ಅಲ್ಪವಿರಾಮವಷ್ಟೇ, ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ" ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.