ETV Bharat / sitara

ಅಪ್ಪುಗಾಗಿ ಹಿಮಾಲಯದಿಂದ ಬಂದ ಅಭಿಮಾನಿಗೆ ಅಶ್ವಿನಿ ಕೊಟ್ರು ಕಾಸ್ಟ್ಲೀ ಉಡುಗೊರೆ

ದೂರದ ಸೈಕಲ್ ಯಾತ್ರೆ ಮಾಡಿದ ಅಪ್ಪು ಅಭಿಮಾನಿ ಗುರು ಪ್ರಕಾಶ್ ಜೊತೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಫೋಟೋ ತೆಗೆಸಿಕೊಳ್ಳುವ ಮೂಲಕ, ಎಂದೂ ಮರೆಯದ ಉಡುಗೊರೆಯನ್ನು ಅಶ್ವಿನಿ ಅವರು ಗುರು ಪ್ರಕಾಶ್‌ಗೆ ಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಹಾಕಿಕೊಂಡಿದ್ದ ಕಾಸ್ಟ್ಲೀ ಬ್ರಾಂಡ್ ಕೂಲಿಂಗ್ ಗ್ಲಾಸ್ ಹಾಗೂ ಅಪ್ಪು ಖರೀದಿಸಿದ ಬಟ್ಟೆಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಗುರು ಪ್ರಕಾಶ್ ಅವರಿಗೆ ನೀಡಿದ್ದಾರೆ..

ಅಭಿಮಾನಿಗೆ ಅಶ್ವಿನಿ ಕೊಟ್ರು ಕಾಸ್ಟ್ಲೀ ಉಡುಗೊರೆ

author img

By

Published : Jan 24, 2022, 6:47 PM IST

Updated : Jan 24, 2022, 7:34 PM IST

ಬೆಂಗಳೂರು: ಕನ್ನಡ ಚಿತ್ರರಂಗದ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಮೂರು ತಿಂಗಳು ಕಳೆಯುತ್ತಿವೆ. ಆದರೆ, ಪುನೀತ್ ಸ್ಮಾರಕ ಈಗ ಅಭಿಮಾನಿಗಳ ಪುಣ್ಯಕ್ಷೇತ್ರ ಆಗುತ್ತಿದೆ. ಕೆಲವು ದಿನಗಳ ಹಿಂದೆ, ಗುರು ಪ್ರಕಾಶ್ ಎಂಬ ಅಭಿಮಾನಿ ಹಿಮಾಲಯದಿಂದ ಅಪ್ಪು ಸಮಾಧಿವರೆಗೂ ಸೈಕಲ್ ಯಾತ್ರೆ ಮಾಡಿ ಗಮನ ಸೆಳೆದಿದ್ದರು.

ಅಭಿಮಾನಿಗೆ ಅಶ್ವಿನಿ ಕೊಟ್ರು ಕಾಸ್ಟ್ಲೀ ಉಡುಗೊರೆ

ಡಿಸೆಂಬರ್ 10ರಿಂದ ಹಿಮಾಲಯದಿಂದ ಸೈಕಲ್ ಯಾತ್ರೆ ಪ್ರಾರಂಭ ಮಾಡಿದ ಗುರು, 42 ದಿನಗಳ ನಂತರ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಬಳಿ ಬಂದು ಸೇರಿದರು. ಸುಮಾರು 3,350km ಸೈಕಲ್ ಸವಾರಿ ಮಾಡಿದ ಕನಕಪುರದ ಅಭಿಮಾನಿಗೆ, ಅಂದು ರಾಘವೇಂದ್ರ ರಾಜ್ ಕುಮಾರ್ ಹಾಗೂ ಯುವರಾಜ್ ಕುಮಾರ್ ಪೇಟಾ ತೊಡಿಸುವ ಮೂಲಕ ಸನ್ಮಾನ ಮಾಡಿದ್ದರು.

ಬಳಿಕ ನಾಗವಾರದ ಶಿವರಾಜ್ ಕುಮಾರ್ ನಿವಾಸಕ್ಕೆ ಅಪ್ಪು ಅಭಿಮಾನಿ ಗುರು ಪ್ರಕಾಶ್ ತೆರಳಿ ಆಶೀರ್ವಾದ ಪಡೆದಿದ್ದರು. ಆ ಸಮಯದಲ್ಲಿ ಶಿವರಾಜ್ ಕುಮಾರ್ ಕೂಡ ಗುರು ಪ್ರಕಾಶ್ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೀಗ ಗುರು ಪ್ರಕಾಶ್​, ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಪುನೀತ್ ಯೂತ್ ಬ್ರಿಗೇಡ್ ಅಭಿಮಾನಿ ಸಂಘದ ಮುರಳಿ, ಸಹಾಯದ ಮೇರೆಗೆ ಗುರು ಪ್ರಕಾಶ್ ಇಂದು ಗಾಂಧಿನಗರದಲ್ಲಿರೋ ವಜ್ರೇಶ್ವರಿ ಸಂಸ್ಥೆಯಲ್ಲಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಅಷ್ಟೇ ಅಲ್ಲ, ದೂರದ ಸೈಕಲ್ ಯಾತ್ರೆ ಮಾಡಿದ ಗುರು ಪ್ರಕಾಶ್ ಜೊತೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಫೋಟೋ ತೆಗೆಸಿಕೊಳ್ಳುವ ಮೂಲಕ, ಎಂದು ಮರೆಯದ ಉಡುಗೊರೆಯನ್ನು ಗುರು ಪ್ರಕಾಶ್‌ಗೆ ಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಹಾಕಿಕೊಂಡಿದ್ದ ಕಾಸ್ಟ್ಲೀ ಬ್ರಾಂಡ್ ಕೂಲಿಂಗ್ ಗ್ಲಾಸ್ ಹಾಗೂ ಅಪ್ಪು ಖರೀದಿಸಿದ ಬಟ್ಟೆಯನ್ನು ಅಶ್ವಿನಿ ಪುನೀತ್ ಅವರು ಗುರು ಪ್ರಕಾಶ್​​ಗೆ ನೀಡಿದ್ದಾರೆ.

ಇದರ ಜೊತೆಗೆ ಗುರು ಪ್ರಕಾಶ್ 3,350 ಕಿಲೋಮೀಟರ್ ಯಾತ್ರೆ ಮಾಡಿದ ಸೈಕಲ್ ಮೇಲೆ ಅಶ್ವಿನಿ ಪುನೀತ್ ರಾಜ್ ಕುಮಾರ್ ತಮ್ಮ ಆಟೋಗ್ರಾಫ್ ಹಾಕುವ ಮೂಲಕ ಹಾಗೂ ಅಭಿಮಾನಿಯ ಕನಸನ್ನು ಈಡೇರಿಸಿದ್ದಾರೆ. ಅಶ್ವಿನಿ ಅವರ ಸರಳತೆಗೆ ಅಪ್ಪು ಅಭಿಮಾನಿ ಗುರು ಪ್ರಕಾಶ್ ಮನ ಸೋತಿದ್ದಾರೆ.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 24, 2022, 7:34 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.