ಕನ್ನಡ ಹಾಗು ತಮಿಳು ಚಿತ್ರ ಚಿತ್ರರಂಗದಲ್ಲಿ ಸ್ಟಾರ್ ಹೀರೋ ಆಗಿ ಮಿಂಚುತ್ತಿರುವ ನಟ ಅರ್ಜುನ್ ಸರ್ಜಾ. ಚಿಕ್ಕ ವಯಸ್ಸಿನಿಂದಲೂ ಆಂಜನೇಯ ಸ್ವಾಮಿ ಮಹಾನ್ ಭಕ್ತರು. ಅರ್ಜುನ್ ಸರ್ಜಾ ಅವರ 11 ವರ್ಷದಿಂದ ಕಂಡ ಕನಸು ನನಸಾಗುವ ಕಾಲ ಕೂಡಿ ಬಂದಿದೆ.
ನಟ ಅರ್ಜುನ್ ಸರ್ಜಾ ಚೆನ್ನೈನ ಗೆರುಗಂಬಾಕಮ್ನಲ್ಲೊಂದು ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಿಸುತ್ತಿದ್ದಾರೆ ಎಂಬ ವಿಚಾರ ಎಲ್ಲರಿಗೂ ಗೊತ್ತಿತ್ತು. ಇದೀಗ ಬರೋಬ್ಬರಿ 11 ವರ್ಷಗಳ ಬಳಿಕ, ಅರ್ಜುನ್ ಸರ್ಜಾ ಬೃಹತ್ ಆಂಜನೇಯನ ವಿಗ್ರಹ ಸ್ಥಾಪಿಸಿರುವ ದೇವಸ್ಥಾನದ ಸಂಪೂರ್ಣ ಕೆಲಸ ಮುಗಿದು ಉದ್ಘಾಟನೆಗೆ ಸಿದ್ಧವಾಗಿದೆ.
ಈ ಬಗ್ಗೆ ಮಾತನಾಡಿರೋ ಅರ್ಜುನ್ ಸರ್ಜಾ, ಕುಟುಂಬದ ಬಹು ದಿನದ ಕನಸಾದ ಆಂಜನೇಯ ಸ್ವಾಮಿ ದೇವಸ್ಥಾನದ ಕುಂಭಾಭಿಷೇಕಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಇದೇ ಜುಲೈ 1 ಮತ್ತ 2 ರಂದು ಈ ಆಂಜನೇಯ ಸ್ವಾಮಿ ದೇವಸ್ಥಾನವನ್ನ ಉದ್ಘಾಟನೆ ಮಾಡಲಾಗುತ್ತಿದೆ.
ಈ ಕಾರ್ಯಕ್ರಮಕ್ಕೆ ಸರ್ಜಾ ತಮ್ಮ ಅಭಿಮಾನಿಗಳು, ಸ್ನೇಹಿತರನ್ನ ಕರೆದು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡುವ ಆಸೆ ಹೊಂದಿದ್ದರು. ಆದರೆ, ಈ ಕೊರೊನಾದಿಂದಾಗಿ ಸರ್ಜಾ ಕುಟುಂಬದವರು ಹಾಗೂ ಕೆಲ ಆತ್ಮೀಯರು, ಸಂಬಂಧಿಕರ ಸಮ್ಮುಖದಲ್ಲಿ ಜುಲೈ 1 ಹಾಗೂ 2ರಂದು ಆಂಜನೇಯಸ್ವಾಮಿ ಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯ ನೆರವೇರಿಸಲಿದ್ದಾರೆ.
ಅಭಿಮಾನಿಗಳಿಗೋಸ್ಕರ ಯೂಟ್ಯೂಬ್ನಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮವನ್ನ ಲೈವ್ ಮಾಡಲು ಅರ್ಜುನ್ ಸರ್ಜಾ ತೀರ್ಮಾನಿಸಿದ್ದಾರೆ. ಈ ಕೊರೊನಾ ಮುಗಿದ ಮೇಲೆ ಫ್ಯಾಮಿಲಿ ಸಮೇತ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬನ್ನಿ ಅಂತ ಅರ್ಜುನ್ ಸರ್ಜಾ ಮನವಿ ಮಾಡಿದ್ದಾರೆ.