ETV Bharat / sitara

ಹುಟ್ಟುಹಬ್ಬದ ದಿನವೇ ಭಾವುಕರಾಗಿ ಕಂಬನಿ ಮಿಡಿದ ಅರ್ಜುನ್ ಸರ್ಜಾ - Arjun sarja Instagram post

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಈ ಬಾರಿ ಆಗಸ್ಟ್ 15 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಚಿರಂಜೀವಿ ಸರ್ಜಾ ಅಗಲಿಕೆಯ ನೋವು ಅವರನ್ನು ಕಾಡುತ್ತಿದ್ದು 'ಈ ಬಾರಿ ನಿನ್ನ ವಿಶ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಅರ್ಜುನ್ ಸರ್ಜಾ ಇನ್ಸ್​​ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ.

Arjun sarja emotional on birthday
ಅರ್ಜುನ್ ಸರ್ಜಾ
author img

By

Published : Aug 17, 2020, 11:41 AM IST

ಆಗಸ್ಟ್​ 15 ರಂದು ಒಂದೆಡೆ ಸ್ವಾತಂತ್ರ್ಯ ದಿನಾಚರಣೆಯಾದರೆ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಹುಟ್ಟುಹಬ್ಬ ಕೂಡಾ. ಆದರೆ ಈ ಬಾರಿ ಅರ್ಜುನ್ ಸರ್ಜಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಅರ್ಜುನ್ ಸರ್ಜಾ ಇನ್ನೂ ಸೋದರಳಿಯ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಲ್ಲೇ ಇದ್ದಾರೆ.

Arjun sarja emotional on birthday
ಚಿರಂಜೀವಿ ಸರ್ಜಾ

ಚಿರಂಜೀವಿ ಸರ್ಜಾ ಅಗಲಿ 3 ತಿಂಗಳು ಕಳೆದಿವೆ. ಆದರೆ ಕುಟುಂಬಕ್ಕೆ ಅವರ ಅಗಲಿಕೆ ನೋವು ಸ್ವಲ್ಪವೂ ಕಡಿಮೆಯಾಗಿಲ್ಲ. ಜನ್ಮದಿನದಂದೂ ಕೂಡಾ ಅರ್ಜುನ್ ಸರ್ಜಾ ಇದೇ ನೋವಿನಲ್ಲಿ ಕಳೆದಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್​​ಟಾಗ್ರಾಮ್​​​ನಲ್ಲಿ ಬರೆದುಕೊಂಡಿರುವ ಅರ್ಜುನ್ ಸರ್ಜಾ, 'ಈ ವರ್ಷ ನಿನ್ನ ಶುಭಾಶಯಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮಗನೇ' ಎಂದು ನೋವು ಹಂಚಿಕೊಂಡಿದ್ದಾರೆ. ಪ್ರತಿ ವರ್ಷ ಅರ್ಜುನ್ ಸರ್ಜಾ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದೊಂದಿಗೆ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.

ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್​​ನಲ್ಲಿ ಅರ್ಜುನ್ ಸರ್ಜಾ ಚಿರಂಜೀವಿ ಸರ್ಜಾ ಜೊತೆಗಿರುವ ಫೋಟೋವನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. ಈ ಪೋಸ್ಟ್ ನೋಡಿ ಅರ್ಜುನ್ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಅಭಿಮಾನಿಗಳು ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ. 'ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಚಿರು' ಎಂದು ಕಮೆಂಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.