ಮುಂಬೈ: ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರು ಗೆಳತಿ ಗೇಬ್ರಿಯೆಲ್ಲಾ ಹಾಗೂ ಮಗ ಆರಿಕ್ನೊಂದಿಗೆ ಬುಡಾಪೇಸ್ಟ್ ಹಾಗೂ ಹಂಗೇರಿಯಲ್ಲಿ ತಮ್ಮ ರಜೆ ದಿನಗಳನ್ನು ಕಳೆದ ಕೆಲ ಫೋಟೋಗಳನ್ನು ಇನ್ಸ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮುಂದಿನ ಸಿನಿಮಾ 'ದಾಕಡ್' ಸೆಟ್ಟೇರುವ ಮೊದಲೇ ತಮ್ಮ ಆತ್ಮೀಯರೊಂದಿಗೆ ರಜೆ ಕಳೆಯಬೇಕಿದೆ ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
"ಸಮ್ ಕ್ವಾಲಿಟಿ ಟೈಮ್ ವಿತ್ ಫ್ಯಾಮಿಲಿ, ಬಿಫೋರ್ ಐ ಗೆಟ್ ವರ್ಕ್'' # ಬ್ಯುಟಿಫುಲ್ # ಬುಡಾಪೆಸ್ಟ್ # ಗ್ರಾಟಿಟ್ಯುಡ್ # ದಾಕಡ್ " ಹೀಗೆಂದು ನಟ ಅರ್ಜುನ್ ರಾಂಪಾಲ್ ತಮ್ಮ ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೋಸ್ಗಳಲ್ಲಿ ಪ್ಲಾಟಿನಂ ಬಣ್ಣದ ಕೂದಲು ಹಾಗೂ ಚಷ್ಮಾದೊಂದಿಗೆ ಅರ್ಜುನ್ ತಮ್ಮ ಹೊಸ ಲುಕ್ನಲ್ಲಿ ಮಿಂಚಿದ್ದಾರೆ. ನಟಿ ಕಂಗನಾ ರಣಾವತ್ ಅವರು ನಟಿಸುತ್ತಿರುವ ದಾಕಡ್ ಚಿತ್ರದಲ್ಲಿ ವಿಲನ್ ಆಗಿ ಅರ್ಜುನ್ ರಾಂಪಾಲ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
- " class="align-text-top noRightClick twitterSection" data="
">
ಇದರರೊಂದಿಗೆ ಅರ್ಜುನ್ ಐತಿಹಾಸಿಕ ಸಿನಿಮಾವಾದ "ದಿ ಬ್ಯಾಟಲ್ ಆಫ್ ಭೀಮಾ ಕೋರೆಗಾಂವ್"ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ರಮೇಶ್ ಥೀಟೆ ನಿರ್ದೇಶನದ ಈ ಸಿನಿಮಾದಲ್ಲಿ ಯೋಧ ಸಿಧ್ನಾಕ್ ಮಹರ್ ಇನಾಮ್ದಾರ್ ಆಗಿ ಕಾಣಿಸಿಕೊಂಡಿದ್ದಾರೆ. ಸನ್ನಿ ಲಿಯೋನ್ ಕೂಡ ಚಿತ್ರದಲ್ಲಿ ಇದ್ದಾರೆ.