ಮುಂಬೈ: ಬಾಲಿವುಡ್ನಲ್ಲಿ ಸದ್ದಿಲ್ಲದೆ ಕೆಲ ಸಿನಿಮಾಗಳನ್ನು ಟೈಟಲ್ ಬಿಡುಗಡೆಗೂ ಮೊದಲೇ ಶೂಟಿಂಗ್ ಮಾಡಿ ಮುಗಿಸಿರುತ್ತಾರೆ. ಅದೇ ರೀತಿ ಇನ್ನೂ ಹೆಸರಿಡದ ಅರ್ಜುನ್ ಕಪೂರ್ ಹಾಗೂ ರಕುಲ್ ಪ್ರೀತ್ ಸಿಂಗ್ ಜೋಡಿಯಾಗಿ ನಟಿಸುತ್ತಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಹೌದು, ಅದಿತಿ ರಾವ್ ಹೈದರಿ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಚಿತ್ರದ ವಿಶೇಷ ಪಾತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ.
ಇದೇ ಮೊದಲ ಬಾರಿಗೆ ಅರ್ಜುನ್ ಹಾಗೂ ರಕುಲ್ ಒಟ್ಟಿಗೆ ನಟಿಸುತ್ತಿದ್ದು, ಚಿತ್ರ ನವಿರಾದ ಗಡಿಯಾಚೆಗಿನ ಪ್ರೇಮ ಕಥೆಯನ್ನು ಒಳಗೊಂಡಿದೆ. ಜೊತೆಗೆ ಕೌಟುಂಬಿಕ ಪ್ರಧಾನ ಕಥೆ ಹೊಂದಿದ್ದು, ಡ್ರಾಮೆಡಿ (ಡ್ರಾಮಾ+ಕಾಮೆಡಿ) ಎಂದು ಚಿತ್ರತಂಡ ಹೇಳಿಕೊಂಡಿದೆ
ಕಾಶ್ವಿ ನಾಯರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಭೂಷಣ್ ಕುಮಾರ್ ಬಂಡವಾಳ ಹೂಡಿದ್ದಾರೆ. ಕೊರೊನಾ ವೈರಸ್ನಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣ ಆಗಸ್ಟ್ 24ರಿಂದ ಮತ್ತೆ ಪುನಾರಂಭವಾಗಿದೆ.