ಶಿರಡಿ: ಖ್ಯಾಟ ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಕುಟುಂಬದ ಜೊತೆ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ರು.
ಅನುಷ್ಕಾ ಅಭಿನಯದ 'ನಿಶಬ್ಧಂ' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರದ ಸಕ್ಸಸ್ಗಾಗಿ ಮಂದಿರಕ್ಕೆ ಬಂದಿದ್ದರು. ಅವರ ಜೊತೆ ತಂದೆ -ತಾಯಿ ಕೂಡ ಆಗಮಿಸಿ, ದೇವರ ದರ್ಶನ ಪಡೆದ್ರು.
ಇಲ್ಲಿಗೆ ಬಂದಿದ್ದರಿಂದ ನನಗೆ ತುಂಬಾ ಸಂತೋಷಷವಾಗಿದೆ. ಈ ಚಿತ್ರವೂ ಉತ್ತಮ ಯಶಸ್ಸು ಕಾಣಲಿ ಎಂದು ದೇವರಲ್ಲಿ ಪಾರ್ಥಿಸಿದ್ದಾರೆಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ. ಜನವರಿ 31 ರಂದು ಚಿತ್ರ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಅನುಷ್ಕಾ ಶೆಟ್ಟಿ ಶಿರಡಿ ದರ್ಶನ ಮಹತ್ವ ಪಡೆದುಕೊಂಡಿದೆ.