ಬೆಂಗಳೂರು : ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಹುಟ್ಟು ಹಬ್ಬದ ಸಂಭ್ರಮದ ವೇಳೆ ಅಭಿಮಾನಿಗಳಿಗೆ ನಿರಾಸೆಯಾಗದಿರಲಿ ಎಂದು ಅಂಬಿ ಅಭಿನಯದ ಎವರ್‌ಗ್ರೀನ್ 'ಅಂತ' ಚಿತ್ರ ರೀ ರಿಲೀಸ್ ಅಗುತ್ತೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬಂದಿತ್ತು. ಅದ್ರೆ, ಇಂದು 'ಅಂತ' ಸಿನಿಮಾ ರೀ ರಿಲೀಸ್ ಆಗದೆ ಅವರ ಅಭಿಮಾನಿಗಳಿಗೆ ಬೇಸರವಾಗಿದ್ದು,ಚಿತ್ರ ಬಿಡುಗಡೆಯಾಗದಿರುವುದಕ್ಕೆ ಕಾರಣ ನೀಡಲಾಗಿದೆ.
ನಿನ್ನೆ ಅಂಬಿ ಹುಟ್ಟು ಹಬ್ಬದ ಪ್ರಯುಕ್ತ ಅಂಬಿ ಸಮಾಧಿ ಬಳಿ ಬಂದಿದ್ದ ರಾಜೇಂದ್ರಸಿಂಗ್ ಬಾಬು ಅವರು ಮಾಧ್ಯಮಗಳ ಜೊತೆ ಮಾತನಾಡಿ, ಅಂತ ಚಿತ್ರದ ಕೆಲವು ಅನುಭವಗಳ ಹಂಚಿಕೊಂಡ್ರು. 80ರ ದಶಕದ ಸೂಪರ್ ಹಿಟ್ ಸಿನಿಮಾ 'ಅಂತ' ಅಂಬರೀಶ್‌ಗೆ ರೆಬೆಲ್ ಸ್ಟಾರ್ ಪಟ್ಟ ಕೊಟ್ಟಿತ್ತು. ಇಂದು ಅಂತ ರೀ ರಿಲೀಸ್ ಆಗಬೇಕಿತ್ತು. ಆದ್ರೆ, ಮೇ 31 ಕ್ಕೆ ಅಭಿಷೇಕ್ ಅಭಿನಯದ ಅಮರ್ ಚಿತ್ರ ರಿಲೀಸ್ ಆಗುತ್ತಿರುವುದರಿಂದ ಅಪ್ಪ ಮಕ್ಕಳ ಸಿನಿಮಾ ಕ್ಲಾಶ್ ಆಗಬಾರದು ಎಂದು ಹತ್ತು ದಿನಗಳ ಕಾಲ ಮುಂದಕ್ಕೆ ಹೋಗಿದೆ ಅಷ್ಟೆ ಎಂದು ಹೇಳಿದರು.
ಆ ಕಾಲದಲ್ಲಿ ಅಂತ ಸಿನಿಮಾ ರಿಲೀಸ್ ಆದಾಗ, ಪಾರ್ಲಿಮೆಂಟ್‌ನಲ್ಲಿ ಸಿನಿಮಾದ ಕುರಿತು ಚರ್ಚೆಯಾಗಿತ್ತು. ಈ ಸಿನಿಮಾದ ನಂತರ ಅಂಬಿ ರೆಬೆಲ್ ಸ್ಟಾರ್ ಆಗಿ ಮಿಂಚಿದರು ಎಂದು ರಾಜೇಂದ್ರ ಸಿಂಗ್ ಬಾಬು ಹಳೆ ನೆನಪುಗಳನ್ನು ಮೆಲುಕುಹಾಕಿದ್ರು.