ಕೊರೊನಾ ಹಾಗೂ ಲಾಕ್ಡೌನ್ಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಗೀತೆಗಳು ಬಂದಿವೆ. ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಾಗೂ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಸೇರಿ 'ಕಾಲ ಕಲಿಸಿದ ಪಾಠ' ಎಂಬ ಗೀತೆಯನ್ನು ಸಿದ್ಧಪಡಿಸಿದ್ದಾರೆ.

ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ನಿರ್ದೇಶಿಸಿ ಅವರೇ ಹಾಡಿದ್ದಾರೆ. ನಾಗೇಂದ್ರ ಪ್ರಸಾದ್ ಅವರ ಲೇಖನಿಯ ಶಕ್ತಿ ಕೂಡಾ ಅಷ್ಟೇ ಗಟ್ಟಿಯಾಗಿದೆ. ಕೊರೊನಾದಿಂದ ತೀವ್ರ ಕಷ್ಟಕ್ಕೊಳಗಾಗಿದ್ದ ಜನರಿಗೆ ಜಾತಿ, ಧರ್ಮ ಎಂಬ ತಾರತಮ್ಯ ಮಾಡದೆ ಆಹಾರ ಸಾಮಗ್ರಿಗಳನ್ನು ಪೂರೈಸಲಾಗಿದೆ. ಜನರು ಕೂಡಾ ಅದೇ ರೀತಿ ತಮಗೆ ಬಂದ ಸಾಮಗ್ರಿಗಳನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗೇಂದ್ರ ಪ್ರಸಾದ್ ಅವರು ದಾನ, ಧರ್ಮದ ಬಗ್ಗೆ ಪದಗಳನ್ನು ಜೋಡಿಸಿದ್ದಾರೆ.
- " class="align-text-top noRightClick twitterSection" data="">
'ಬಿಡಿಸಿ ಹೇಳಬೇಕೆ ಪಡೆದ ಸುಖಗಳಾ' ಎಂಬ ಸಾಲಿನಿಂದ ಆರಂಭವಾಗುವ ಗೀತೆಯನ್ನು ಅನೂಪ್ ಸೀಳಿನ್ ಸುಂದರವಾಗಿ ಹಾಡಿದ್ದಾರೆ. ವೆಸ್ಲೆ ಬ್ರೌನ್ ಹಾಗೂ ಉಪ್ಪಿ ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಶ್ರೀನಿವಾಸ್ ಆಚಾರ್ ಗಿಟಾರ್ ನುಡಿಸಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಈ ಲಾಕ್ಡೌನ್ ಬಹಳಷ್ಟು ಜನರಿಗೆ ಅನೇಕ ಪಾಠಗಳನ್ನು ಕಲಿಸಿರುವುದಂತೂ ನಿಜ.