ಕನ್ನಡ ಧಾರಾವಾಹಿ ಲೋಕದಲ್ಲಿ ತನ್ನದೇ ಹೊಸ ಮಜಲುಗಳನ್ನು ಸೃಷ್ಟಿಸುತ್ತ ಮುನ್ನುಗ್ಗುತ್ತಿರುವ ಧಾರಾವಾಹಿ 'ಜೊತೆ ಜೊತೆಯಲಿ'. ಇತ್ತೀಚೆಗಷ್ಟೇ ಪ್ರಸಾರವಾಗಲು ಶುರು ಮಾಡಿರುವ ಜೊತೆ ಜೊತೆಯಲಿ ಧಾರಾವಾಹಿಯಿಂದ ವಿಷ್ಣು ದಾದ ಅಳಿಯ ಅನಿರುದ್ಧ್ ಅಭಿಮಾನಿ ಬಳಗ ದೊಡ್ಡದಾಗುತ್ತಾ ಹೋಗಿದೆ.
ಹೀಗೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯ ನಾಯಕ ಅನಿರುದ್ಧ್ ತಮ್ಮ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ. ಅನಿರುದ್ಧ್ ಸದ್ಯ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಫುಲ್ ಬ್ಯುಸಿಯಾಗಿದ್ದಾರೆ. ಇವರಿಗೆ ದಿನಕ್ಕೆ ಸಾವಿರಾರು ಅಭಿಮಾನಿಗಳು ಮೆಸೇಜ್ ಮಾಡುತ್ತಿದ್ದು, ಎಲ್ಲಾ ಅಭಿಮಾನಿಗಳ ಮೆಸೇಜ್ಗೆ ಉತ್ತರಿಸಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಅನಿರುದ್ಧ್ ತಮ್ಮ ಫ್ಯಾನ್ಸ್ ಕ್ಷಮೆಯಾಚಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿರುವ ಅನಿರುದ್ಧ್, ಎಲ್ಲಾ ನನ್ನ ಪ್ರೀತಿಯ ಸ್ನೇಹಿತರಿಗೆ ನಮಸ್ಕಾರ. ನಿಮ್ಮೆಲ್ಲರ ಪ್ರೀತಿಯಿಂದ ನನ್ನ ಈ ಅಧಿಕೃತ ಪೇಜ್ ಮೂಲಕ ಒಂದು ಲಕ್ಷ ಸ್ನೇಹಿತರ ಪ್ರೀತಿಯನ್ನು ನಾನು ಪಡೆದಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ನಾ ಸದಾ ಚಿರಋಣಿ.
ಇಂದು ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಮೆಸೇಜ್ಗಳು ಬಂದಿವೆ. ನನಗೆ ಬಿಡುವಾದಾಗಲೆಲ್ಲಾ ನಿಮಗೆ ಉತ್ತರಿಸಲು ಪ್ರಯತ್ನಿಸುತ್ತೇನೆ. ಆದರೂ ಸಮಯ ಸಾಲದು. ದಯಮಾಡಿ ಕ್ಷಮೆ ಇರಲಿ.
ಮೆಸೇಜ್ಗಳ ಮೂಲಕ, ಕಮೆಂಟ್ಗಳ ಮೂಲಕ ನನಗೆ ಪ್ರೀತಿ ತೋರಿದ ಎಲ್ಲರಿಗೂ ಹಾಗೂ ಜೊತೆ ಜೊತೆಯಲಿ ಧಾರಾವಾಹಿಯನ್ನು ಇಷ್ಟಪಟ್ಟು ನೋಡುವ ಮೂಲಕ ಪ್ರೋತ್ಸಾಹಿಸುತ್ತಿರುವ ಎಲ್ಲಾ ನನ್ನ ತಾಯಂದಿರಿಗೂ, ಸಹೋದರ, ಸಹೋದರಿಯರಿಗೂ, ಜೀ ವಾಹಿನಿ ಹಾಗೂ ನನ್ನ ಪ್ರೀತಿಯ ಜೊತೆ ಜೊತೆಯಲಿ ತಂಡಕ್ಕೂ ನನ್ನ ಮನಃಪೂರ್ವಕ ಧನ್ಯವಾದಗಳು.. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ.. ಸದಾ ನಿಮ್ಮವ, ನಿಮ್ಮ ಅನಿರುದ್ಧ್ ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="">