ಹೊಸಬರ ಹೊಸ ಕನಸು 'ವೀಕ್ಎಂಡ್' ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಭಾರೀ ಥ್ರಿಲ್ನಲ್ಲಿದೆ. ಹಿರಿಯ ನಟ ಅನಂತ್ನಾಗ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮೇ 24ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಲವ್, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್, ಕಾಮಿಡಿ, ತಾತ - ಮೊಮ್ಮಗನ ವಿಶಿಷ್ಟ ಕೆಮಿಸ್ಟ್ರಿಯೊಂದಿಗೆ ಅತ್ಯಂತ ಪ್ರಸ್ತುತ ಸಮಸ್ಯೆ ಹಾಗೂ ಲೈಫ್ಸ್ಟೈಲ್ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ನಿರ್ದೇಶಕ ಶೃಂಗೇರಿ ಸುರೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿ ಮಂಜುನಾಥ್. ಡಿ ನಿರ್ಮಿಸಿದ್ದಾರೆ. ಕವಲುದಾರಿ, ನಟಸಾರ್ವಭೌಮ ಮುಂತಾದ ಚಿತ್ರಗಳನ್ನು ವಿತರಣೆ ಮಾಡಿದ ಧೀರಜ್ ಎಂಟರ್ಪ್ರೈಸಸ್ 'ವೀಕ್ಎಂಡ್' ಚಿತ್ರವನ್ನು ಹಂಚಿಕೆ ಮಾಡುತ್ತಿದೆ.

ಈಗಾಗಲೇ ವಿಭಿನ್ನ ಹಾಡುಗಳ ಮೂಲಕ ಗಮನ ಸೆಳೆದಿರುವ ಈ ಚಿತ್ರದಲ್ಲಿ, ಅನಂತ್ನಾಗ್ ವಿಭಿನ್ನ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹೊಸ ಪ್ರತಿಭೆಗಳಾದ ಮಿಲಿಂದ್, ಸಂಜನಾ ಬುರ್ಲಿ ನಾಯಕ - ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ನಾಗಭೂಷಣ್, ಗೋಪಿನಾಥ್ ಭಟ್ ಮುಂತಾದ ಪ್ರತಿಭಾವಂತರ ದೊಡ್ಡ ತಂಡವೇ ಈ ಚಿತ್ರದಲ್ಲಿರುವುದು ವಿಶೇಷ.