ಹೈದರಾಬಾದ್(ತೆಲಂಗಾಣ) : ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಮಾಡಿರುವ ಟ್ವೀಟ್ವೊಂದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಯಾವ ಕಾರಣಕ್ಕಾಗಿ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆಂಬುದರ ಬಗ್ಗೆ ಈವರೆಗೆ ಯಾವುದೇ ರೀತಿಯ ಖಚಿತ ಮಾಹಿತಿ ಲಭ್ಯವಾಗಿಲ್ಲ.
-
T 4205 - heart pumping .. concerned .. and the hope ..🙏❤️
— Amitabh Bachchan (@SrBachchan) February 27, 2022 " class="align-text-top noRightClick twitterSection" data="
">T 4205 - heart pumping .. concerned .. and the hope ..🙏❤️
— Amitabh Bachchan (@SrBachchan) February 27, 2022T 4205 - heart pumping .. concerned .. and the hope ..🙏❤️
— Amitabh Bachchan (@SrBachchan) February 27, 2022
ನಿನ್ನೆ ರಾತ್ರಿ ಟ್ವೀಟರ್ನಲ್ಲಿ 'ಹೃದಯ ಬಡಿಯುತ್ತಿದೆ.. ಕಾಳಜಿ ಜೊತೆಗೆ ಭರವಸೆ ಇದೆ'("Heart pumping .. concerned .. and the hope ...") ಎಂದು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ದಿಢೀರ್ ಶಾಕ್ಗೊಳಗಾಗಿದ್ದ ಅವರ ಅಭಿಮಾನಿಗಳು ಆರೋಗ್ಯದ ಬಗ್ಗೆ ನಿಗಾವಹಿಸಿ, ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂಬ ಸಂದೇಶ ರವಾನೆ ಮಾಡಿದ್ದಾರೆ.
ಇದರ ಮಧ್ಯೆ ವಿಶ್ರಾಂತಿ ಪಡೆದುಕೊಂಡು ಚೆನ್ನಾಗಿ ನಿದ್ದೆ ಮಾಡಿ ಸರ್ ಎಂದು ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದಾನೆ. ಆದರೆ, ಯಾವ ಕಾರಣಕ್ಕಾಗಿ ಬಿಗ್ ಬಿ ಈ ರೀತಿಯಾಗಿ ಬರೆದುಕೊಂಡಿದ್ದಾರೆಂಬ ಮಾಹಿತಿ ಮಾತ್ರ ಸಿಕ್ಕಿಲ್ಲ. ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿರಿ: ಏನಮ್ಮಿ.. ಏನಮ್ಮಿ.. ಹಾಡಿಗೆ ಬಂತು ನೂರು ಮಿಲಿಯನ್ ವೀಕ್ಷಣೆ!
ಬಾಲಿವುಡ್ನಲ್ಲಿ ಸಕ್ರಿಯವಾಗಿರುವ ಅಮಿತಾಭ್ ಬಚ್ಚನ್ಗೆ 79 ವರ್ಷ ವಯಸ್ಸಾಗಿದ್ದು, ಕಳೆದ ಕೆಲ ವರ್ಷಗಳಿಂದ ಆರೋಗ್ಯಕ್ಕೆ ಸಂಬಂಧಿಸಿರುವ ಸಣ್ಣ-ಪುಟ್ಟ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಮಧ್ಯೆ ಕೂಡ ಅವರು ಅನೇಕ ಚಿತ್ರಗಳಲ್ಲಿ ನಟನೆ ಮಾಡಿದ್ದು, ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮವನ್ನ ಸಹ ನಡೆಸಿಕೊಡುತ್ತಿದ್ದಾರೆ.
ಅಮಿತಾಭ್ ಬಚ್ಚನ್ ನಟನೆ ಮಾಡಿರುವ ಜುಂಡ್ ಸಿನಿಮಾ ಮಾರ್ಚ್ 4ರಂದು ದೇಶಾದ್ಯಂತ ರಿಲೀಸ್ ಆಗಲಿದ್ದು, ಇದರ ಬೆನ್ನಲ್ಲೇ ನಟಿ ರಶ್ಮಿಕಾ ಜೊತೆ ನಟನೆ ಮಾಡಿರುವ ಗುಡ್ಬೈ ಸಹ ರಿಲೀಸ್ ಆಗಲಿದೆ.