ETV Bharat / sitara

ಕೋವಿಡ್ ನಡುವೆ ಗೋವಾದಲ್ಲಿ 'ಏಕ್ ವಿಲನ್ ರಿಟರ್ನ್ಸ್' ಶೂಟಿಂಗ್ - ಗೋವಾದಲ್ಲಿ ಏಕ್ ವಿಲನ್ ರಿಟರ್ನ್ಸ್ ಶೂಟಿಂಗ್

ಕೋವಿಡ್ ಉಲ್ಬಣದ ನಡುವೆ 'ಏಕ್ ವಿಲನ್ ರಿಟರ್ನ್ಸ್' ತಂಡವು ಗೋವಾದಲ್ಲಿ ಶೂಟಿಂಗ್ ಪ್ರಾರಂಭಿಸಿದೆ. ಅರ್ಜುನ್ ಕಪೂರ್, ತಾರಾ ಸುತಾರಿಯಾ, ಜಾನ್ ಅಬ್ರಹಾಂ ಮತ್ತು ದಿಶಾ ಪಟಾನಿ ನಟಿಸುತ್ತಿರುವ ಈ ಚಿತ್ರವು 2014 ರ ಬಾಲಿವುಡ್ ಚಿತ್ರ ಏಕ್ ವಿಲನ್ ನ ಮುಂದುವರಿದ ಭಾಗವಾಗಿದೆ.

ek villain shoot in goa
'ಏಕ್ ವಿಲನ್ ರಿಟರ್ನ್ಸ್' ಶೂಟಿಂಗ್
author img

By

Published : Apr 17, 2021, 2:10 PM IST

ಹೈದರಾಬಾದ್ : ಬಾಲಿವುಡ್ ನಟಿ ತಾರಾ ಸುತಾರಿಯಾ ಮತ್ತು ಅರ್ಜುನ್ ಕಪೂರ್ ತಮ್ಮ ಮುಂದಿನ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ 'ಏಕ್ ವಿಲನ್ ರಿಟರ್ನ್ಸ್' ನ ಚಿತ್ರೀಕರಣ ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಕ್ಲ್ಯಾಪ್​ ಬೋರ್ಡ್​ನ ಬ್ಲೂಮ್ ರಂಗ್ ವಿಡಿಯೋ ಹಂಚಿಕೊಂಡಿರುವ ತಾರಾ ಈ ಕುರಿತು ಮಾಹಿತಿ ನೀಡಿದ್ದಾರೆ. ತನ್ನ ಪೋಸ್ಟ್ ಸಹ ನಟ ಅರ್ಜುನ್, ನಿರ್ದೇಶಕ ಮೋಹಿತ್ ಸೂರಿ ಮತ್ತು ನಿರ್ಮಾಪಕ ಅಮುಲ್ ವಿಕಾಸ್ ಮೋಹನ್​ ಅವರಿಗೆ ಟ್ಯಾಗ್ ಮಾಡಿದ್ದಾರೆ.

ek villain shoot in goa
ತಾರಾ ಸುತಾರಿಯಾ ಇನ್​ಸ್ಟಾಗ್ರಾಂ ಪೋಸ್ಟ್

​ಅರ್ಜುನ್ ಕೂಡ ತಾರಾ ಅವರ ಪೋಸ್ಟ್ ಶೇರ್ ಮಾಡುವ ಮೂಲಕ ಅಭಿಮಾನಿಗಳ ಚಿತ್ರೀಕರಣ ಕುರಿತು ಮಾಹಿತಿ ನೀಡಿದ್ದಾರೆ. 2017ರ ಡ್ರಾಮ ಫಿಲಂ ಹಾಲ್ಫ್ ಗರ್ಲ್​ ಫ್ರೆಂಡ್​ ಬಳಿಕ ಅರ್ಜುನ್ ಮತ್ತು ನಿರ್ದೇಶಕ ಮೋಹಿತ್ ಮತ್ತೆ ಜೊತೆಯಾಗುತ್ತಿದ್ದಾರೆ.

ಚಿತ್ರದ ಎರಡನೇ ಶೂಟಿಂಗ್ ಶೆಡ್ಯೂಲ್​ಗಾಗಿ ಚಿತ್ರತಂಡ ಗೋವಾಕ್ಕೆ ತೆರಳಿದೆ. ಮೊದಲ ಶೂಟಿಂಗ್ ಮಾರ್ಚ್ 1 ರಂದು ಮುಂಬೈನಲ್ಲಿ ದಿಶಾ ಪಟಾನಿ ಮತ್ತು ಜಾನ್ ಅಬ್ರಹಾಂ ನಡುವೆ ಚಿತ್ರೀಕರಿಸಲಾಗಿದೆ. ಕೋವಿಡ್ ನಡುವೆ ಗೋವಾಕ್ಕೆ ತೆರಳಿರುವ ಚಿತ್ರತಂಡ ಕೆಲ ಸುರಕ್ಷಿತ ಸ್ಥಳಗಳಲ್ಲಿ ಚಿತ್ರೀಕರಣ ಮುಂದುವರೆಸಲಿದೆ.

ಏಕ್ ವಿಲನ್ ರಿಟರ್ನ್ಸ್ 2014 ರ ಬಾಲಿವುಡ್ ಚಿತ್ರ ಏಕ್ ವಿಲನ್​ನ ಮುಂದುವರಿದ ಭಾಗವಾಗಿದೆ. ಮೊದಲ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಶ್ರದ್ಧಾ ಕಪೂರ್ ಮತ್ತು ರಿತೀಶ್ ದೇಶ್​ಮುಖ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.