ಹೈದರಾಬಾದ್(ತೆಲಂಗಾಣ): ಕಳೆದ ಮೂರು ದಿನಗಳ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ವಿಷರಹಿತ ಹಾವೊಂದು ಕಚ್ಚಿ, ಆಸ್ಪತ್ರೆಯಲ್ಲಿ ಕೆಲ ಗಂಟೆಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದರು. ಇದೀಗ 21 ವರ್ಷದ ಅಮೆರಿಕದ ಪಾಪ್ ಸಿಂಗರ್ ಹಾಗೂ ನಟಗೆ ಹಾವು ಕಚ್ಚಿರುವ ಘಟನೆ ಒಂದು ವಾರದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
-
never again pic.twitter.com/Mx85NsvZVi
— Maeta (@Maetasworld) December 19, 2021 " class="align-text-top noRightClick twitterSection" data="
">never again pic.twitter.com/Mx85NsvZVi
— Maeta (@Maetasworld) December 19, 2021never again pic.twitter.com/Mx85NsvZVi
— Maeta (@Maetasworld) December 19, 2021
ಶೂಟಿಂಗ್ವೊಂದರಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಅಮೆರಿಕದ ಪಾಪ್ ಗಾಯಕಿ ಮೇಟಾ ಅವರಿಗೆ ಹಾವು ಕಚ್ಚಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಳೆದ ವಾರ ನಡೆದಿರುವ ಘಟನೆ ಇದಾಗಿದ್ದು, ಸದ್ಯ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪಾಪ ನಟಿ, ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಸಹ ಪೋಸ್ಟ್ ಮಾಡಿದ್ದಾರೆ.
ಹಾವು ಮೈ ಮೇಲೆ ಹಾಕಿಕೊಂಡು ವಿಡಿಯೋ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ನಟಿ ಮೇಟಾ ಕೆನ್ನೆಗೆ ಅದು ಕಚ್ಚಿದೆ. ತಕ್ಷಣವೇ ಶೂಟಿಂಗ್ ಸ್ಥಗಿತಗೊಳಿಸಿ, ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆಂದು ತಿಳಿದು ಬಂದಿದೆ.
ಇದನ್ನೂ ಓದಿರಿ: ಯುವತಿಗೆ ಚಾಕುವಿನಿಂದ ಇರಿದು ಪರಾರಿಯಾದ ವ್ಯಕ್ತಿ.. ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆ
ಇದೇ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿರುವ ಪಾಪ್ ಸಿಂಗರ್ ತಾವು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ. ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಸಾವಿರಾರು ಜನರು ಇದರ ವೀಕ್ಷಣೆ ಮಾಡಿದ್ದಾರೆ.