ಹೈದರಾಬಾದ್: ತೆಲುಗು ನಟ ಅಲ್ಲು ಸಿರಿಶ್ ಗುರುವಾರ ತಮ್ಮ ಮುಂಬರುವ ಸಿನಿಮಾದ ಪ್ರಿ ಲುಕ್ ಅನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಬಿಡುಗಡೆ ಮಾಡಿದ್ದು, ಈ ಚಿತ್ರದ ಹೆಸರು ಮತ್ತು ದೃಶ್ಯವನ್ನು ಅವರ ಜನ್ಮದಿನವಾದ ಮೇ 30 ರಂದು ಪ್ರಕಟಿಸಲಾಗುವುದು ಎಂದು ಹೇಳಿಕೊಂಡಿದ್ದಾರೆ.
ಸಿನಿಮಾದ ಪ್ರಿ-ಲುಕ್ನಲ್ಲಿ ದಂಪತಿಗಳು ಭಾವೋದ್ರಿಕ್ತ ರೊಮ್ಯಾಂಟಿಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು, ಪರಸ್ಪರ ಒಬ್ಬರನ್ನೊಬ್ಬರು ಕೈ ಹಿಡಿದಿರುವುದು ಕಂಡು ಬರುತ್ತದೆ. ಪೋಸ್ಟರ್ನಲ್ಲಿ # ಸಿರಿಶ್ 6 ಎಂದು ಬರೆದಿದ್ದು, ಇದು ತೆಲುಗು ಚಿತ್ರರಂಗದಲ್ಲಿ ನಟನ ಆರನೇ ಸಿನೆಮಾವಾಗಲಿದೆ ಎಂಬ ಅಂಶವನ್ನು ಉಲ್ಲೇಖಿಸಿದೆ.
"ನನ್ನ ಮುಂದಿನ ಚಿತ್ರದ ಶೀರ್ಷಿಕೆ ಮತ್ತು ಮೊದಲ ನೋಟವನ್ನು ಭಾನುವಾರ (ಮೇ 30) ಬೆಳಗ್ಗೆ 11 ರಂದು ಪ್ರಕಟಿಸಲಾಗುವುದು, ಅದು ನನ್ನ ಜನ್ಮದಿನವೂ ಆಗುತ್ತದೆ. ಇದಕ್ಕಾಗಿ ನಾನು ಉತ್ಸುಕನಾಗಿದ್ದೇನೆ!" ಎಂದು ನಟ ತಮ್ಮ ಪೋಸ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಮೂಲಗಳ ಪ್ರಕಾರ, ಅಂತಿಮ ಶೀರ್ಷಿಕೆ ಪ್ರಕಟಣೆಗೆ ಮುನ್ನ 2ನೇ ಪ್ರಿ-ಲುಕ್ ಕೂಡಾ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಈ ಚಿತ್ರದಲ್ಲಿ ಅಲ್ಲು ಸಿರಿಶ್ ಜೊತೆ ಅನು ಎಮ್ಯಾನುಯೆಲ್ ನಟಿಸಿದ್ದು, ಸಿನಿಮಾವನ್ನು ರಾಕೇಶ್ ಸಾಸಿ ನಿರ್ದೇಶಿಸಿದ್ದಾರೆ ಮತ್ತು ಇದನ್ನು ಸಿರಿಶ್ ಅವರ ತಂದೆ, ನಿರ್ಮಾಪಕ ಅಲ್ಲು ಅರವಿಂದ್ ಪ್ರಸ್ತುತಪಡಿಸುತ್ತಿದ್ದಾರೆ.
ಓದಿ: Puneeth Rajkumar: ಲಾಕ್ಡೌನ್ನಲ್ಲಿ ಹೊಸ ವಿದ್ಯೆ ಕಲಿತ ಅಪ್ಪು.. ಫಿದಾ ಆಗೋಯ್ತು ಕುಟುಂಬ